ನಾಗ್ಪುರ ಮೂಲದ ರೇಡಿಯೋ ಜಾಕಿ, ರೇಡಿಯೋ ಮಿರ್ಚಿಯಲ್ಲಿ ಹಾಯ್ ನಾಗ್ಪುರ್ ಶೋ ನಡೆಸಿಕೊಡುತ್ತಿದ್ದ ಶುಭಂ ಕೆಚೆ, ಶೋ ಮಧ್ಯದಲ್ಲೇ ಮೃತಪಟ್ಟಿದ್ದಾರೆ. 24 ವರ್ಷದ ಶುಭಂ ಬೆಳಗ್ಗೆ 9.30ರ ವೇಳೆಗೆ ಎದೆನೋವಿನಿಂದ ಬಳಲಿದ್ದರು.
ಕಾರ್ಯಕ್ರಮದ ಮಧ್ಯೆ ವಿರಾಮವಿದ್ದಾಗ ರೆಕಾರ್ಡಿಂಗ್ ರೂಮಿನಿಂದ ಹೊರಬಂದಿದ್ದ ಶುಭಂ ಬಾತ್ ರೂಮ್ ನಲ್ಲಿ ಕುಸಿದು ಬಿದ್ರು. ಕೂಡಲೇ ಕಚೇರಿಯ ಭದ್ರತಾ ಸಿಬ್ಬಂದಿ ಹಾಗೂ ಜವಾನ ಶುಭಂರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ರು, ಅಷ್ಟರಲ್ಲಾಗ್ಲೇ ಅವರು ಮೃತಪಟ್ಟಿದ್ದರು.
ಬೆಳಗ್ಗೆ ಕಚೇರಿಯಲ್ಲಿ ಹೆಚ್ಚು ಜನರು ಇರುತ್ತಿರಲಿಲ್ಲ, ಕುಸಿದು ಬೀಳುತ್ತಿದ್ದಂತೆ ಶುಭಂ ಭದ್ರತಾ ಸಿಬ್ಬಂದಿಯನ್ನು ಕೂಗಿ ಕರೆದಿದ್ರು, ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ರು. 3 ವರ್ಷಗಳ ಹಿಂದೆ ಶುಭಂ ತಂದೆ ಮೃತಪಟ್ಟಿದ್ದು, ತಾಯಿ ಹಾಗೂ ಸಹೋದರಿಯ ಜವಾಬ್ಧಾರಿ ಅವರ ಮೇಲಿತ್ತು. ಶುಭಂ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟಿರಬಹುದೆಂದು ಹೇಳಲಾಗಿದೆ.