ಸಸ್ಯಾಹಾರಿ ಊಟದ ಬದಲು ಮಾಂಸಾಹಾರಿ ಮೀಲ್ ಸರ್ವ್ ಮಾಡಿದ ಸಿಬ್ಬಂದಿಗೆ ಕಾಲು ಹಿಡಿದು ಕ್ಷಮೆ ಕೇಳುವಂತೆ ಪ್ರಯಾಣಿಕರು ಆಗ್ರಹಿಸಿದ ಘಟನೆ ಶಾಂಘೈ-ದೆಹಲಿ-ಮುಂಬೈ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದೆ. ಸೆಪ್ಟೆಂಬರ್ 25 ರಂದು ನಡೆದ ಘಟನೆ ಇದು, ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಬಹುತೇಕ ಭಾರತೀಯರು.
ಶಾಂಘೈನಲ್ಲಿ ಅಪ್ ಲೋಡ್ ಮಾಡಲಾದ ಸಸ್ಯಾಹಾರಿ ಊಟವನ್ನು ಕೆಂಪು ಹಾಳೆಯಲ್ಲಿ ಸರ್ವ್ ಮಾಡಲಾಗಿತ್ತು, ಮಾಂಸಾಹಾರಿ ಊಟ ಹಸಿರು ಹಾಳೆಯಲ್ಲಿತ್ತು. ಎಕಾನಮಿ ಕ್ಲಾಸ್ ನಲ್ಲಿ ಕುಳಿತಿದ್ದ ಕುಟುಂಬವೊಂದು ಈ ವಿಚಾರವನ್ನು ವಿಮಾನ ಸಿಬ್ಬಂದಿ ಗಮನಕ್ಕೆ ತಂದಿತ್ತು. ಕೂಡಲೇ ಕ್ಷಮೆ ಯಾಚಿಸಿದ ಸಿಬ್ಬಂದಿ ಇಡೀ ಗುಂಪಿಗೆ ನೀಡಿದ್ದ ಊಟವನ್ನು ಬದಲಾಯಿಸಿದ್ರು.
ಈ ಗದ್ದಲದಲ್ಲಿ ಕೆಲ ಪ್ರಯಾಣಿಕರು ತಮಗೆ ಗೋಮಾಂಸ ನೀಡಲಾಗಿದೆ ಅಂತಾ ಆರೋಪಿಸಿದ್ರು. ಆಗ ಪರಿಸ್ಥಿತಿ ಕೈಮೀರಿತ್ತು, ಇಬ್ಬರು ಪ್ರಯಾಣಿಕರು ಪ್ರಮಾದ ಎಸಗಿದ ಸಿಬ್ಬಂದಿ ತಮ್ಮ ಕಾಲು ಹಿಡಿದು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ರು. ಇನ್ನು ಕೆಲವರು ಲಿಖಿತ ದೂರು ನೀಡುವುದಾಗಿ ಹೇಳಿದ್ರು, ಕ್ಷಮೆ ಕೇಳದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೆಲವರು ಬೆದರಿಸಿದ್ರು. ವಿಮಾನ ಸಿಬ್ಬಂದಿ ಮತ್ತು ಕ್ಯಾಪ್ಟನ್ ಎಲ್ಲರೂ ಬಂದು ಪ್ರಯಾಣಿಕರನ್ನು ಸಮಾಧಾನಪಡಿಸಲು ಹರಸಾಹಸಪಟ್ರು.