ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಮತ್ತೆ ಸುದ್ದಿಯಾಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಾಣದೇ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕ್ರಿಕೆಟ್ ಜೀವನದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಮುಂದಾಗಿರುವ ಶ್ರೀಶಾಂತ್, ಮಲಯಾಳಂ ಚಿತ್ರ ‘ಟೀಂ 5’ ನ ಹಾಡು ‘ನೀಲ ಶಂಕು ಪುಷ್ಪಮೆ’ ರಿಲೀಸ್ ಆಗಿದೆ. ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಶ್ರೀಶಾಂತ್ ಹಾಗೂ ನಿಕ್ಕಿ ಗರ್ಲಾನಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 51 ಸೆಕೆಂಡ್ ಇರುವ ರೊಮ್ಯಾಂಟಿಕ್ ಹಾಡು ಮೋಡಿ ಮಾಡುವಂತಿದೆ.
ಕೇರಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶ್ರೀಶಾಂತ್ ಗೆ ಯಶಸ್ಸು ಸಿಕ್ಕಿರಲಿಲ್ಲ. ಇದೀಗ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರ ಸಿನಿಮಾದ ಸಾಂಗ್ ಕುತೂಹಲ ಮೂಡಿಸಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.