ದೇಶದೆಲ್ಲೆಡೆ ಸಂಭ್ರಮದಿಂದ ಕರವಾಚೌತ್ ಆಚರಿಸಲಾಗಿದೆ. ಇದ್ರಲ್ಲಿ ಕ್ರಿಕೆಟ್ ಆಟಗಾರರ ಪತ್ನಿಯರೂ ಹಿಂದೆ ಬಿದ್ದಿಲ್ಲ. ಅನೇಕ ಆಟಗಾರರ ಪತ್ನಿಯರು ಕರವಾಚೌತ್ ಆಚರಿಸಿದ್ದಾರೆ. ತಮ್ಮ ಪತಿಯ ಆಯುಷ್ಯ ವೃದ್ಧಿಗೆ ವ್ರತ ಕೈಗೊಂಡಿದ್ದರು.
ಇಂದು ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಹುಟ್ಟುಹಬ್ಬ. ಬರ್ತ್ ಡೇಗಿಂತ ಒಂದು ದಿನ ಮೊದಲು ಸೆಹ್ವಾಗ್ ಪತ್ನಿ ಆರತಿ ಪತಿಗಾಗಿ ವ್ರತ ಮಾಡಿದ್ದಾರೆ. ವ್ರತ ಆಚರಿಸಿದ ಆರತಿ ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ. ನನ್ನ ಪ್ರೀತಿಯ ವೀರೇಂದ್ರ ಸೆಹ್ವಾಗ್ ಗಾಗಿ ಕರವಾಚೌತ್ ವ್ರತ ಆಚರಿಸುವುದು ನನಗೆ ಹೆಮ್ಮೆಯ ವಿಷಯ. ಇದು ನನಗೆ ಇಷ್ಟ. ಹಾಗೆ ನಾನು ಕಾಯುವ ದಿನಗಳಲ್ಲಿ ಇದೂ ಒಂದು ಎಂದಿದ್ದಾರೆ ಆರತಿ.
ಸೆಹ್ವಾಗ್ ಪತ್ನಿಯ ಹಾಗೆ ಹರ್ಭಜನ್ ಪತ್ನಿ ಗೀತಾ ಬಸ್ರಾ ತಮ್ಮ ಮೊದಲ ಕರವಾ ಚೌತ್ ಆಚರಿಸಿದ್ರು. ರೋಹಿತ್ ಶರ್ಮಾ ಪತ್ನಿ ರಿತಿಕಾ ಕೂಡ ವ್ರತ ಕೈಗೊಂಡಿದ್ದರು. ಗೀತಾ ಹಾಗೂ ರಿತಿಕಾ ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಹೇಳಿದ್ದಲ್ಲದೆ ಫೋಟೋ ಅಪ್ ಲೋಡ್ ಮಾಡಿದ್ದಾರೆ.
ಆದ್ರೆ ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿ ಮಾತ್ರ ಇದಕ್ಕೆ ವಿರುದ್ಧವಾಗಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನಾನು ಕರವಾಚೌತ್ ವ್ರತ ಕೈಗೊಂಡಿಲ್ಲ ಎಂದು ಸಾಕ್ಷಿ ಹೇಳಿದ್ದಾರೆ.