ಲಂಡನ್ ನಲ್ಲಿ ನಡೆದ ವಿಲಕ್ಷಣ ಘಟನೆ ಇದು. ಹದಿಹರೆಯದ ಯುವತಿಯೊಬ್ಳು, 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ತಪ್ಪಿಗೆ ಜೈಲುಪಾಲಾಗಿದ್ದಾಳೆ. ಈಕೆಗೆ ಈಗ 19 ವರ್ಷ ವಯಸ್ಸು. ದುರ್ಬಲ ಮನಸ್ಸಿನ 13 ವರ್ಷದ ಶಾಲಾ ಬಾಲಕನ ಜೊತೆ ಈಕೆ ಲೈಂಗಿಕ ಸಂಬಂಧ ಹೊಂದಿದ್ದಳು. ಆದ್ರೆ ಆಕೆ ಯಾವುದೇ ರೀತಿಯ ಹಿಂಸೆ ನೀಡಿರಲಿಲ್ಲ, ಬಾಲಕನ ವೈಯಕ್ತಿಕ ಸುರಕ್ಷತೆ ದೃಷ್ಟಿಯಿಂದ ಯುವತಿಗೆ ಶಿಕ್ಷೆ ವಿಧಿಸಲಾಗಿದೆ.
ಯುವತಿಯೇ ಅಲ್ಕೋಹಾಲ್ ಖರೀದಿಸಿದ್ದಳು, ಅದನ್ನು ಇಬ್ಬರೂ ಸೇವಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ತಾನು ಯುವತಿಯೊಬ್ಬಳೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಬಾಲಕ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದ.
ಅವರಿಬ್ರೂ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿಕೊಂಡಿರುವುದು ಕೂಡ ಪತ್ತೆಯಾಗಿದೆ. ಆರೋಪಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ, ಆಕೆ ಮುಗ್ಧ ಹುಡುಗಿ, ಸಾಮಾಜಿಕ ಜ್ಞಾನದ ಕೊರತೆಯಿಂದ ಇಂತಹ ಕೃತ್ಯ ಎಸಗಿದ್ದಾಳೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿರುವ ಕೋರ್ಟ್, ಅವಳಿಗೆ 16 ತಿಂಗಳ ಸೆರೆವಾಸ ವಿಧಿಸಿದೆ. ಯುವ ಅಪರಾಧಿಗಳ ಸೆಲ್ ನಲ್ಲಿ ಅವಳನ್ನು ಇಡಲಾಗಿದೆ.