Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಬಿಹಾರದಲ್ಲಿ ಗ್ಯಾರೇಜೇ ಕಾಲೇಜು..!

$
0
0
ಬಿಹಾರದಲ್ಲಿ ಗ್ಯಾರೇಜೇ ಕಾಲೇಜು..!

ಬಿಹಾರದ ಶಾಲಾ- ಕಾಲೇಜುಗಳ ಕರ್ಮಕಾಂಡ ಒಂದೊಂದಾಗೇ ಬಯಲಾಗ್ತಿದೆ. ಪರೀಕ್ಷೆಯಲ್ಲಿ ಸಿನಿಮಾಗಳ ಹೆಸರು, ಹಾಡು ಬರೆದು ರ್ಯಾಂಕ್ ಬಂದಿದ್ದ ರೂಬಿ ರೈ ಮುಖವಾಡ ಕಳಚಿ ಬೀಳುತ್ತಿದ್ದಂತೆ ಶಾಲಾ-ಕಾಲೇಜುಗಳ ಅಕ್ರಮವೂ ಬೆಳಕಿಗೆ ಬರುತ್ತಿದೆ.

ಇಲ್ಲಿನ 68 ಕಾಲೇಜುಗಳು ಹಾಗೂ 19 ಶಾಲೆಗಳು ಅನಧಿಕೃತ, ಇವು ಹೆಸರಿಗೆ ಮಾತ್ರ ಶಾಲಾ-ಕಾಲೇಜುಗಳಷ್ಟೆ, ಸ್ವಂತ ಕಟ್ಟಡವಾಗ್ಲಿ ಮೂಲ ಸೌಕರ್ಯಗಳಾಗ್ಲಿ ಇಲ್ಲ. ಬಿಹಾರ ಪರೀಕ್ಷಾ ಮಂಡಳಿ ಮುಖ್ಯಸ್ಥರಾದ ಆನಂದ್ ಕಿಶೋರ್ ನಡೆಸಿದ ತನಿಖೆಯಲ್ಲಿ ಈ ಅಕ್ರಮ ಪತ್ತೆಯಾಗಿದೆ. ಕೇಶವ್ ವಿಂದೇವರಿ ದೇವಿ ಎಂಬ ಕಾಲೇಜೊಂದನ್ನು ಗ್ಯಾರೇಜ್ ನಲ್ಲಿ ನಡೆಸಲಾಗ್ತಿದೆ, ಇನ್ನು ಕೆಲವು ಶಾಲೆಗಳಿಗಿರುವುದು ಒಂದೇ ಕೋಣೆ.

ಈ ವರ್ಷ ನಡೆದ 12ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕೆಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಬೇರೆ ವ್ಯಕ್ತಿಗಳು ಬರೆದಿದ್ದರು ಅನ್ನೋ ಸಂಗತಿ ಕೂಡ ಬಹಿರಂಗವಾಗಿದೆ. ವಿಎನ್ ರಾಯ್ ಕಾಲೇಜಿನ ಪ್ರಾಂಶುಪಾಲ ಬಚ್ಚಾ ರಾಯ್ ಈ ಕರ್ಮಕಾಂಡದ ರೂವಾರಿ. ಆತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಸಿನಿಮಾಗಳ ಹೆಸರು ಬರೆದ್ರೂ ಟಾಪರ್ ಆಗಿದ್ದ ರೂಬಿ ರೈ ಅನ್ನು ಕೂಡ ಬಂಧಿಸಿ, ಬಾಲಾಪರಾಧಿಗಳ ನಿಲಯಕ್ಕೆ ಕಳುಹಿಸಲಾಗಿತ್ತು.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>