ಅವಿಭಜಿತ ಆಂಧ್ರಪ್ರದೇಶಕ್ಕೆ ನಿಗದಿಯಾಗಿದ್ದ ಕೃಷ್ಣಾ ನದಿ ನೀರನ್ನು ಹೊರತುಪಡಿಸಿ ತಮಗೆ ಪ್ರತ್ಯೇಕವಾಗಿ ನೀರು ನಿಗದಿ ನೀಡಬೇಕೆಂದು ಕೋರಿ ತೆಲಂಗಾಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೃಷ್ಣಾ ನದಿ ನೀರು ನ್ಯಾಯಾಧೀಕರಣ ಮಹತ್ವದ ತೀರ್ಪು ನೀಡಿದೆ.
ಈ ಹಿಂದೆ ಅವಿಭಜಿತ ಆಂಧ್ರಪ್ರದೇಶಕ್ಕೆ ನಿಗದಿಯಾಗಿದ್ದ 1005 ಟಿಎಂಸಿ ನೀರನ್ನೇ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಹಂಚಿಕೊಳ್ಳಬೇಕೆಂದು ನ್ಯಾಯಾಧೀಕರಣ ತೀರ್ಪು ನೀಡಿದ್ದು, ಇದರಿಂದಾಗಿ ಕರ್ನಾಟಕ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ಯೋಜನಾವಾರು ನೀರು ಹಂಚಿಕೆ ಮಾಡಬೇಕೆಂದು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಕರಣ ತಳ್ಳಿ ಹಾಕಿದೆ. ಅವಿಭಜಿತ ಆಂಧ್ರ ಪ್ರದೇಶಕ್ಕೆ ನಿಗದಿಪಡಿಸಲಾಗಿದ್ದ ನೀರನ್ನೇ ಈಗ ವಿಭಜನೆಗೊಂಡಿರುವ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಹಂಚಿಕೊಳ್ಳಬೇಕೆಂಬ ತೀರ್ಪು ನೀಡಿರುವ ಕಾರಣ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಂತಾಗಿದೆ.