ನಾಳೆ ಕರ್ವಾಚೌತ್, ದೇಶದ ಸಾವಿರಾರು ಸುಮಂಗಲಿಯರು ಈ ಹಬ್ಬವನ್ನು ಆಚರಿಸ್ತಾರೆ. ತಮ್ಮ ಪತಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಇಡೀ ದಿನ ಉಪವಾಸವಿದ್ದು ವ್ರತ ಮಾಡ್ತಾರೆ. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಎದ್ದು ಹೆಂಗೆಳೆಯರು ವ್ರತ ಆರಂಭಿಸ್ತಾರೆ, ಸಂಜೆ ಚಂದ್ರೋದಯವಾದ ಮೇಲೆ ಉಪವಾಸ ಕೈಬಿಡ್ತಾರೆ.
ಉತ್ತರ ಭಾರತದಲ್ಲಿ ಕರ್ವಾಚೌತ್ ಆಚರಿಸುವವರ ಸಂಖ್ಯೆ ಹೆಚ್ಚು. ಸಂಜೆ ಉಪವಾಸ ಕೈಬಿಡುವ ಮುನ್ನ ಸುಮಂಗಲಿಯರು ಹೊಸ ಬಟ್ಟೆ ತೊಟ್ಟು ಸುಂದರವಾಗಿ ಅಲಂಕರಿಸಿಕೊಳ್ತಾರೆ. ತಪ್ಪದೇ ಮೆಹಂದಿ ಹಾಕಿಕೊಳ್ಳುವುದು ವಿಶೇಷ. ಈ ಬಾರಿ ಓಲಾ, ಹೆಂಗೆಳೆಯರನ್ನು ಸೆಳೆಯಲು ಹೊಸ ಆಫರ್ ನೀಡಿದೆ. ಉಚಿತವಾಗಿ ಮೆಹಂದಿ ಹಾಕಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಿದೆ.
ನಿಮ್ಮ ಮನೆಗೆ ಬಂದು ಕಲಾವಿದರು ಮೆಹಂದಿ ಹಾಕಿಕೊಡ್ತಾರೆ. ನಾಳೆ ಸಂಜೆ 5 ಗಂಟೆಯೊಳಗೆ ಓಲಾ ನೀಡಿರುವ ಅರ್ಜಿಯನ್ನು ಭರ್ತಿ ಮಾಡಿದ್ರೆ ನೀವು ಕೂಡ ಫ್ರೀಯಾಗಿ ಮೆಹಂದಿ ಹಾಕಿಸಿಕೊಳ್ಳಬಹುದು. ಕ್ಯೂನಲ್ಲಿ ನಿಲ್ಲಬೇಕಾದ ತಲೆನೋವಿಲ್ಲ, ಮೆಹಂದಿ ಹಾಕಿಸಿಕೊಂಡ ಮೇಲೆ ಮನೆಗೆ ಹೇಗೆ ಬರೋದು ಅನ್ನೋ ಆಲೋಚನೆಯೂ ಬೇಡ. ನಿಮ್ಮ ಮನೆಯಲ್ಲೇ ಕುಳಿತು ನಿಮಗಿಷ್ಟವಾದ ಡಿಸೈನ್ ನ ಮೆಹಂದಿಯನ್ನು ಹಾಕಿಸಿಕೊಳ್ಳುವ ಅವಕಾಶವನ್ನು ಓಲಾ ಕಲ್ಪಿಸಿಕೊಟ್ಟಿದೆ.