Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಈಜಾಡುತ್ತಿದ್ದವನ ನೆರವಿಗೆ ಧಾವಿಸಿತು ಮರಿಯಾನೆ

$
0
0
ಈಜಾಡುತ್ತಿದ್ದವನ ನೆರವಿಗೆ ಧಾವಿಸಿತು ಮರಿಯಾನೆ

ಉಪಕಾರ ಪಡೆದರೂ ಅಪಕಾರ ಮಾಡುವ ಮನುಷ್ಯರ ಮಧ್ಯೆ ಮೂಕ ಪ್ರಾಣಿಗಳೇ ಎಷ್ಟೋ ಮೇಲು ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ತನ್ನ ತರಬೇತುದಾರ ನದಿಯಲ್ಲಿ ಮುಳುಗುತ್ತಿದ್ದಾನೆಂದು ಭಾವಿಸಿದ ಮರಿಯಾನೆಯೊಂದು ಗುಂಪನ್ನು ತೊರೆದು ಆತನನ್ನು ರಕ್ಷಿಸಲು ಮುಂದಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಉತ್ತರ ಥಾಯ್ಲೆಂಡ್ ನಲ್ಲಿ ನಡೆದಿದ್ದು, ಅಲ್ಲಿನ ಆನೆಗಳ ಪಾರ್ಕ್ ನ ತರಬೇತುದಾರ ಡೆರಿಕ್ ಎಂಬಾತ ನದಿಯಲ್ಲಿ ಈಜಾಡುತ್ತಿದ್ದ. ಆದರೆ ಆತ ಕೈ ಬಡಿಯುತ್ತಿದ್ದುದ್ದನ್ನು ತಪ್ಪಾಗಿ ಗ್ರಹಿಸಿದ ಖಾಮ್ ಲ್ಹಾ ಎಂಬ ಮರಿಯಾನೆ ರಕ್ಷಣೆಗೆ ಮೊರೆಯಿಡುತ್ತಿದ್ದಾನೆಂದು ತಿಳಿದು ಗುಂಪನ್ನು ತೊರೆದು ನೀರಿಗಿಳಿದಿದೆ.

ನದಿಯ ಇನ್ನೊಂದು ಬದಿಯಲ್ಲಿದ್ದವರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಡೆರಿಕ್ ಮತ್ತೊಂದು ತೀರವನ್ನು ಸುರಕ್ಷಿತವಾಗಿ ಸೇರುವವರೆಗೂ ಈ ಮರಿಯಾನೆ ಹಿಂಬಾಲಿಸಿಕೊಂಡು ಬಂದಿದೆ. ಡೆರಿಕ್, ದಡ ಸೇರಿದ ಬಳಿಕ ಮರಿಯಾನೆಯೂ ನಿಂತುಕೊಂಡಿದೆ. ಅಕ್ಟೋಬರ್ 12 ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿರುವ ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಮೂಕ ಪ್ರಾಣಿಯ ಸ್ವಾಮಿನಿಷ್ಟೆಯನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>