ಕಲಬುರಗಿ: ಲಘು ಭೂಕಂಪನದಿಂದ ಆಗಾಗ ಭೂಮಿಯೊಳಗಿಂದ ಕೇಳುವ ನಿಗೂಢ ಶಬ್ಧ. ಮನೆಯೊಳಗೆ ಹೋಗಲು ಭಯಪಡುವ ಗ್ರಾಮಸ್ಥರು. ಇದು ಇಂದ್ರಪಾಡ ಹೊಸಹಳ್ಳಿ ಗ್ರಾಮದಲ್ಲಿ ಕಂಡು ಬಂದ ಚಿತ್ರಣ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಇಂದ್ರಪಾಡ ಗ್ರಾಮದ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಭೂಮಿ ಆಗಾಗ ಕಂಪಿಸುತ್ತಿದೆ. ನಿಗೂಢ ಶಬ್ಧವೂ ಕೇಳಿ ಬರುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಮನೆಯೊಳಗೆ ಹೋಗಲು ಭಯಪಡುತ್ತಿದ್ದಾರೆ. ಮನೆ ಕುಸಿದು ಬೀಳುವ ಆತಂಕದಿಂದ ಹೊರಗೇ ಕಾಲ ಕಳೆಯುವಂತಾಗಿದೆ. ಕಳೆದ ರಾತ್ರಿ 3 ಬಾರಿ ಶಬ್ಧ ಕೇಳಿ ಬಂದಿದ್ದರಿಂದ ರಾತ್ರಿಯೆಲ್ಲಾ ಜನ ಹೊರಗೆ ಕಾಲಕಳೆಯುವಂತಾಗಿದೆ.
ಭೂಗರ್ಭ ಶಾಸ್ತ್ರಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗ್ರಾಮದಲ್ಲಿ ಭೂಕಂಪನದ ಮಾಪಕ ಅಳವಡಿಸಿ ಅಧ್ಯಯನ ನಡೆಸಲು ಮುಂದಾಗಿದೆ. ಗ್ರಾಮಸ್ಥರು ಮಾತ್ರ ಆಗಾಗ ಸಂಭವಿಸುವ ಭೂಕಂಪನ ಮತ್ತು ನಿಗೂಢ ಶಬ್ಧದಿಂದ ಕಂಗಾಲಾಗಿದ್ದಾರೆ.