ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಸೆಹ್ವಾಗ್, ಕಲಾಂ ಅವರಿಂದಲೇ 2002 ರಲ್ಲಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಆ ವರ್ಷ ಬಿಸಿಸಿಐನಿಂದ ನಾಮ ನಿರ್ದೇಶನಗೊಂಡ ಏಕೈಕ ಕ್ರಿಕೆಟಿಗ ಸೆಹ್ವಾಗ್.
ಇವತ್ತು ಭಾರತದ ಕ್ಷಿಪಣಿ ಪುರುಷ ಕಲಾಂ ಅವರ 85ನೇ ಹುಟ್ಟುಹಬ್ಬ. ಸೆಹ್ವಾಗ್ ಟ್ವಿಟ್ಟರ್ ನಲ್ಲಿ ಕಲಾಂ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಕಲಾಂ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ಅಪ್ ಲೋಡ್ ಮಾಡಿರುವ ವೀರು, ಇವತ್ತು ಎಲ್ಲರೂ ಕಲಾಂರನ್ನು ನೆನೆಯೋಣ, ಅವರಿಗೊಂದು ಸಲಾಂ ಅಂತಾ ಬರೆದಿದ್ದಾರೆ. ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ, 2002-2007 ರವರೆಗೂ ಸೇವೆ ಸಲ್ಲಿಸಿದ್ದಾರೆ.