ಮೆಕ್ಸಿಕೋ: ಆಳ ಸಮುದ್ರದಲ್ಲಿ ದೈತ್ಯ ವೈಟ್ ಶಾರ್ಕ್ ಫೋಟೋ ತೆಗೆಯಲು ಹೋಗಿದ್ದ, ಡೈವರ್ ಒಬ್ಬ ಅಪಾಯದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ.
ಮೆಕ್ಸಿಕೋದ ಕಡಲಿನಲ್ಲಿ ಬೋಟ್ ನಲ್ಲಿ ತಂಡವೊಂದು ವೈಟ್ ಶಾರ್ಕ್ ಫೋಟೋ ಹಿಡಿಯಲು ಹೋಗಿದ್ದು, ಇದಕ್ಕಾಗಿ ವಿಶೇಷವಾಗಿ ನಿರ್ಮಿಸಲಾಗಿದ್ದ ಲೋಹದ ಪಂಜರದಲ್ಲಿ ಇಳಿದು, ಸಮೀಪದಿಂದ ಫೋಟೋ ತೆಗೆಯಲು ಮುಂದಾಗಿದ್ದಾನೆ. ಆಗ ದಿಢೀರನೇ ಎರಗಿದ ಶಾರ್ಕ್, ಪಂಜರದೊಳಗೇ ನುಗ್ಗಿದ್ದು, ಬಾಗಿಲನ್ನು ಬೇಧಿಸಿ ಮೇಲೇರಿ ಬಂದಿದೆ.
ಇದರಿಂದಾಗಿ ಗಾಯಗೊಂಡ ಶಾರ್ಕ್, ಅಲ್ಲಿಂದ ಹೋಗಿದ್ದು, ನಂತರ ಪಂಜರದೊಳಗಿಂದ ಡೈವರ್ ಮೇಲೆ ಬಂದಿದ್ದಾನೆ. ಇದನ್ನು ತಂಡದಲ್ಲಿದ್ದವರು ಬೋಟ್ ಮೇಲಿಂದಲೇ ಆವಾಕ್ಕಾಗಿ ನೋಡಿದ್ದಾರೆ. ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ಹರಿದಾಡುತ್ತಿದೆ. ಅಪಾರ ಸಂಖ್ಯೆಯ ಜನ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.