ನ್ಯೂಯಾರ್ಕ್: ಕಾಮದ ಮದವೇರಿದವರಿಗೆ ಭಯ, ನಾಚಿಕೆ ಇರುವುದೇ ಇಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಇದಕ್ಕೆ ಪೂರಕವಾದ ಪ್ರಕರಣವೊಂದು ಅಮೆರಿಕದಲ್ಲಿ ನಡೆದಿದೆ.
ಕಾಮದ ಮದದಲ್ಲಿ ಮೈಮರೆತ ಜೋಡಿಯೊಂದು ಮೆಟ್ಟಿಲ ಬಳಿಯಲ್ಲೇ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸಿದ ಘಟನೆ ವರದಿಯಾಗಿದೆ. ನ್ಯೂಯಾರ್ಕ್ ಸಿಟಿಯ ಜನನಿಬಿಡ ಬ್ರೂಕ್ಲಿನ್ ಸ್ಟ್ರೀಟ್ ನಲ್ಲಿರುವ ಟೌನ್ ಹಾಲ್ ನ ಮೆಟ್ಟಿಲುಗಳ ಬಳಿ ಬೆಳ್ಳಂಬೆಳಿಗ್ಗೆ ಮೈಮರೆತ ಪುರುಷ ಹಾಗೂ ಮಹಿಳೆ ಬೆತ್ತಲಾಗಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ಕೆಲವರು ಇದನ್ನು ಕಂಡೂ ಕಾಣದಂತೆ ಅಲ್ಲಿಂದ ಜೋರಾಗಿ ಹೆಜ್ಜೆ ಹಾಕಿದ್ದಾರೆ.
ಮತ್ತೆ ಕೆಲವರು ಇವರ ಕಾಮದಾಟವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹೀಗೆ ಬಹಿರಂಗವಾಗಿ ಸರಸ ಸಲ್ಲಾಪ ನಡೆಸಿದ ಈ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.