ವಾಣಿಜ್ಯ ನಗರಿ ಮುಂಬೈನಲ್ಲಿ ರಸ್ತೆಗಳೇ ಜನರ ಪಾಲಿಗೆ ಸಾವಿನ ಮನೆಯಾಗಿಬಿಟ್ಟಿವೆ. ರಸ್ತೆ ಗುಂಡಿ ಯುವತಿಯೊಬ್ಬಳನ್ನು ಬಲಿ ಪಡೆದಿದೆ. ಬೈಕ್ ನಲ್ಲಿ ತನ್ನ ತಂದೆಯೊಂದಿಗೆ ತೆರಳುತ್ತಿದ್ದ 26 ವರ್ಷದ ನೇಹಾ ಮಿರ್ಚಂದಾನಿ ಎಂಬಾಕೆ ರಸ್ತೆ ಗುಂಡಿಯಲ್ಲಿ ಹಾರಿ ಬಿದ್ದಿದ್ದಾಳೆ, ನೇಹಾಳ ಮೇಲೆ ಟ್ರಕ್ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಖೆಮಾನಿ ಚೌಕದ ಬಳಿ ಈ ಅಪಘಾತ ಸಂಭವಿಸಿದೆ.
ನೇಹಾ ತನ್ನ ತಂದೆ ಮಹೇಶ್ ಅವರೊಂದಿಗೆ ಅಂಬರ್ನಾಥ್ ನಲ್ಲಿರುವ ಗಾರ್ಡಿಯನ್ ಡೆಂಟಲ್ ಕಾಲೇಜಿಗೆ ತೆರಳುತ್ತಿದ್ಲು. ಪ್ರತಿದಿನ ನೇಹಾಳನ್ನು ಅಂಬರ್ನಾಥ್ ರೈಲ್ವೆ ಸ್ಟೇಶನ್ ನಲ್ಲಿ ಬಿಟ್ಟು ತಂದೆ ವಾಪಸ್ಸಾಗ್ತಾ ಇದ್ರು, ಅಲ್ಲಿಂದ ಆಕೆ ಆಟೋದಲ್ಲಿ ಹೋಗುತ್ತಿದ್ಲು. ಈಗಷ್ಟೆ ಡೆಂಟಲ್ ಸರ್ಜರಿಯಲ್ಲಿ ಮಾಸ್ಟರ್ಸ್ ಮುಗಿಸಿದ್ದ ನೇಹಾ ರಸ್ತೆ ಗುಂಡಿಗೆ ಜೀವ ತೆತ್ತಿದ್ದಾಳೆ. ಅಪಘಾತ ನಡೆದ ವೇಳೆ ನೇಹಾ, ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ಲು. ತಂದೆ ಮಹೇಶ್ ರಸ್ತೆ ಗುಂಡಿಯನ್ನು ಗಮನಿಸಿರಲಿಲ್ಲ.
ಅಪಘಾತದಲ್ಲಿ ಮಗಳನ್ನು ಕಳೆದುಕೊಂಡಿರುವ ಮಹೇಶ್, ಮುಂಬೈನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ. ಈ ಸಾವಿಗೆ ಕಾರ್ಪೊರೇಷನ್ ಹೊಣೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಅಧಿಕಾರಿಗಳು ಮಾತ್ರ ಇನ್ನಾರು ತಿಂಗಳಲ್ಲಿ ಗುಂಡಿ ಮುಚ್ತೀವಿ ಅಂತಾ ಭರವಸೆಯ ಮಾತನಾಡ್ತಿದ್ದಾರೆ. ಅಷ್ಟರಲ್ಲಿ ಇನ್ನೆಷ್ಟು ಮಂದಿ ಬಲಿಯಾಗ್ತಾರೋ ಗೊತ್ತಿಲ್ಲ.