ಅಪಘಾತದಲ್ಲಿ ಗಾಯಗೊಂಡ ಸಹೋದರನನ್ನು ಆಸ್ಪತ್ರೆಗೆ ಕರೆ ತಂದವರನ್ನೇ ವ್ಯಕ್ತಿಯೊಬ್ಬ ದೋಚಿದ ಪ್ರಕರಣ ಬರೇಲಿಯಲ್ಲಿ ನಡೆದಿದೆ.
ಯುಸುಫ್ ಖಾನ್ ಮತ್ತವರ ಪತ್ನಿ ಕಾರ್ ನಲ್ಲಿ ಪ್ರಯಾಣಿಸ್ತಾ ಇದ್ರು. ಲಾಲ್ ಪಾಠಕ್ ನಲ್ಲಿ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರಿಗೆ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರರಿಬ್ಬರು ಗಾಯಗೊಂಡ್ರು.
ಯುಸುಫ್ ಮತ್ತವರ ಪತ್ನಿ, ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿದ್ದ ವಿಶಾಲ್ ಎಂಬಾತ ತನ್ನ ಸಹೋದರ ದೀಪಕ್ ನನ್ನು ಆಸ್ಪತ್ರೆಗೆ ಕರೆಸಿಕೊಂಡಿದ್ದಾನೆ. ಆಸ್ಪತ್ರೆಗೆ ಬಂದ ದೀಪಕ್, ಯುಸುಫ್ ಮತ್ತವರ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.
ಕಾರಿನ ಕೀ ಮತ್ತು ಮೊಬೈಲ್ ಕಸಿದುಕೊಂಡಿದ್ದಾನೆ, ಬಳಿಕ ಯುಸುಫ್ ಪತ್ನಿಯ ಚಿನ್ನದ ಸರವನ್ನೂ ಬಲವಂತವಾಗಿ ಪಡೆದುಕೊಂಡು ಅಲ್ಲಿಂದ ಓಡಿ ಹೋಗಲು ಸಜ್ಜಾಗಿದ್ದ. ಕೂಡಲೇ ಯುಸುಫ್ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ರು. ಕೊತ್ವಾಲಿ ಠಾಣೆ ಪೊಲೀಸರು ದೀಪಕ್ ನನ್ನು ಬಂಧಿಸಿ ಕರೆದೊಯ್ದಿದ್ದಾರೆ.