ಅನ್ಯ ಗ್ರಹ ಜೀವಿಗಳ ಇರುವಿಕೆ ಕುರಿತು ಇರುವ ಕುತೂಹಲದಂತೆಯೇ ಭೂತ- ಪ್ರೇತಗಳ ಅಸ್ತಿತ್ವದ ಕುರಿತೂ ಮಾನವನಲ್ಲಿ ಕುತೂಹಲವಿದ್ದೇ ಇದೆ. ಭೂತ- ಪ್ರೇತಗಳನ್ನು ಹುಡುಕಿಕೊಂಡು ಕೆಲವರು ಸ್ಮಶಾನದಲ್ಲಿ ರಾತ್ರಿಯಿಡಿ ಕಾಲ ಕಳೆದಿರುವ ಉದಾಹರಣೆಯೂ ಇದೆ.
ಹೀಗೆ ಲಂಡನ್ ನಲ್ಲಿ ಪ್ರೇತ ಹುಡುಕಿಕೊಂಡು ಹೋಗಿದ್ದ ತಂಡವೊಂದು ಅಲ್ಲಿ ತಾವು ಕಂಡಿದ್ದ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದೆ. ಪ್ರೇತಗಳ ವಾಸಸ್ಥಳ ಎಂಬ ಕುಖ್ಯಾತಿ ಹೊಂದಿದ್ದ ಮನೆಯೊಂದಕ್ಕೆ ಈ ತಂಡ ಹೋಗಿದ್ದು, ಅಲ್ಲಿ ಇದ್ದಕ್ಕಿದ್ದಂತೆಯೇ ಕುರ್ಚಿಯೊಂದು ಮೆಟ್ಟಿಲುಗಳ ಮೇಲಿನಿಂದ ಕೆಳಗೆ ಬಿದ್ದಿದೆ.
ಈ ತಂಡ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಇದರ ದೃಶ್ಯಾವಳಿಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದನ್ನು ವೀಕ್ಷಿಸಿರುವ ಅಸಂಖ್ಯಾತ ಮಂದಿ ಭೂತ- ಪ್ರೇತಗಳ ಇರುವಿಕೆ ಕುರಿತು ಪರ- ವಿರೋಧದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.