ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಅಮೆರಿಕಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ. 66 ವರ್ಷದ ಮಿಥುನ್ ಚರ್ಕವರ್ತಿ ಚಾನೆಲ್ಲೊಂದರಲ್ಲಿ ಪ್ರಸಾರವಾಗ್ತಿದ್ದ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದ್ರೆ ಆರೋಗ್ಯ ಹದಗೆಟ್ಟಿದ್ದರಿಂದ ಲಾಸ್ ಏಂಜಲೀಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದ್ರೆ ಎರಡು ದಿನಗಳ ಹಿಂದೆ ಅವರ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆನ್ನು ನೋವಿನ ಸಮಸ್ಯೆಯಿಂದ ಮಿಥುನ್ ಬಳಲ್ತಿದ್ದಾರೆ. 2009ರಲ್ಲಿ ಇಮ್ರಾನ್ ಖಾನ್ ಹಾಗೂ ಶೃತಿ ಹಾಸನ್ ಅಭಿನಯದ ‘ಲಕ್’ ಚಿತ್ರದ ಶೂಟಿಂಗ್ ವೇಳೆ ಮಿಥುನ್ ಬೆನ್ನಿನ ಮೂಳೆ ಮುರಿದಿತ್ತು. ಸ್ಟಂಟ್ ಮಾಡುವ ವೇಳೆ ಮಿಥುನ್ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದರು.
ಈ ತಿಂಗಳ ಕೊನೆಯಲ್ಲಿ ಅವರು ಮುಂಬೈಗೆ ವಾಪಸ್ ಆಗಲಿದ್ದು, ಮಿಥುನ್ ತಮ್ಮ ಫೋನ್ ಬಳಸುತ್ತಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಯಾವುದೇ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.
1976ರಲ್ಲಿ ತಮ್ಮ ವೃತ್ತಿ ಜೀವನ ಶುರುಮಾಡಿರುವ 66 ವರ್ಷದ ಮಿಥುನ್, ಹಿಂದಿ, ಬೆಂಗಾಲಿ, ಭೋಜ್ಪುರಿ ಸೇರಿದಂತೆ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.