ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹೈದ್ರಾಬಾದ್ ನ ಟೆಕ್ಕಿ ಆದಿತ್ಯ ಶ್ರೀವಾಸ್ತವ ಸುರಕ್ಷಿತವಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ.
ಆದಿತ್ಯ ನಾಪತ್ತೆಯಾಗಿರುವ ಬಗ್ಗೆ ಫೇಸ್ ಬುಕ್ ನಲ್ಲೂ ಪೋಸ್ಟ್ ಮಾಡಲಾಗಿತ್ತು, ಮಾಹಿತಿ ನೀಡುವಂತೆ ಫೇಸ್ ಬುಕ್ ಬಳಕೆದಾರರಲ್ಲಿ ಅವರ ಭಾವಿ ಪತ್ನಿ ಕೃತಿಕಾ ಸಕ್ಸೇನಾ ಮನವಿ ಮಾಡಿದ್ದರು.
ಬೆಂಗಳೂರಿಗೆ ಬಂದಿದ್ದ ಟೆಕ್ಕಿ ಆದಿತ್ಯ, ಅಕ್ಟೋಬರ್ 10ರಂದು ಮರಳಿ ಹೈದ್ರಾಬಾದ್ ಗೆ ಹೊರಟಿದ್ದರು. ಆದ್ರೆ ಅಲ್ಲಿಗೆ ತಲುಪಿರಲಿಲ್ಲ, 3 ದಿನಗಳವರೆಗೂ ಆದಿತ್ಯ ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಯಾರಿಗೂ ಸುಳಿವಿರಲಿಲ್ಲ. ಆದಿತ್ಯ ನಾಪತ್ತೆ ಬಗ್ಗೆ ಅವರ ಸ್ನೇಹಿತರು ಬೆಂಗಳೂರು ಹಾಗೂ ಹೈದ್ರಾಬಾದ್ ನಲ್ಲಿ ಪ್ರಕರಣ ದಾಖಲಿಸಿದ್ರು.
ಇದೀಗ ಆದಿತ್ಯ ಪತ್ತೆಯಾಗಿದ್ದು, ಸುರಕ್ಷಿತವಾಗಿದ್ದಾರೆ ಅಂತಾ ಅವರ ಭಾವಿ ಪತ್ನಿ ಕೃತಿಕಾ ಸಕ್ಸೇನಾ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ. ನಿಮ್ಮೆಲ್ಲರ ಹರಕೆ, ಹಾರೈಕೆಯಿಂದ ಆದಿತ್ಯ ಸೇಫಾಗಿದ್ದಾರೆಂದು ಧನ್ಯವಾದ ಅರ್ಪಿಸಿದ್ದಾರೆ. ಆದ್ರೆ ಆದಿತ್ಯ ನಾಪತ್ತೆಯಾಗಿದ್ಹೇಗೆ ಅನ್ನೋದನ್ನು ಬಹಿರಂಗಪಡಿಸಿಲ್ಲ.