ತಾಯಿಯೊಬ್ಬರ ನೋವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಂದಿಸಿದ್ದಾರೆ. ಎರಡು ದಿನ ರಾಯಭಾರಿ ಕಚೇರಿಗೆ ರಜೆಯಿದ್ದರೂ ಅಮೆರಿಕಾದಲ್ಲಿರುವ ಭಾರತೀಯ ನಿವಾಸಿಗೆ ವೀಸಾ ನೀಡುವ ವ್ಯವಸ್ಥೆ ಮಾಡಿದ್ದಾರೆ.
ವಾಸ್ತವವಾಗಿ ಕರ್ನಾಲ್ ನಿವಾಸಿ ಸರಿತಾ ಮಗ ಅಭಯ್ ಅಮೆರಿಕಾದಲ್ಲಿ ವಾಸವಾಗಿದ್ದಾನೆ. ಆತನ ತಂದೆಯ ಅಂತ್ಯಕ್ರಿಯೆಗೆ ಅಭಯ್ ಕರ್ನಾಲ್ ಗೆ ಬರಬೇಕಾಗಿತ್ತು. ಆದ್ರೆ ವಿಜಯದಶಮಿ ಹಾಗೂ ಮೊಹರಂ ಹಿನ್ನೆಲೆಯಲ್ಲಿ ನಿನ್ನೆ ಹಾಗೂ ಇಂದು ಅಮೆರಿಕಾ ರಾಯಭಾರಿ ಕಚೇರಿಗೆ ರಜೆ ಇದೆ. ಹಾಗಾಗಿ ಅಭಯ್ ಗೆ ವೀಸಾ ಸಿಗುವುದು ತಡವಾಗ್ತಿತ್ತು.
ಈ ಸಂಬಂಧ ಸರಿತಾ, ಸುಷ್ಮಾ ಅವರಿಗೆ ಟ್ವೀಟ್ ಮಾಡಿದ್ದಾರೆ. ಆದಷ್ಟು ಬೇಗ ಮಗನಿಗೆ ವೀಸಾ ನೀಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಸುಷ್ಮಾ ಸ್ವರಾಜ್, ಅಮೆರಿಕಾದಲ್ಲಿರುವ ರಾಯಭಾರಿ ಕಚೇರಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ. ಹಾಗೆ ಸರಿತಾಗೆ ಕರೆ ಮಾಡಿಸಿ ಪೂರ್ಣ ಮಾಹಿತಿ ಪಡೆದಿದ್ದಾರೆ. ಆದಷ್ಟು ಬೇಗ ಅಭಯ್ ಭಾರತಕ್ಕೆ ಬರಲು ಅನುಕೂಲವಾಗುವಂತೆ ವೀಸಾ ನೀಡುವ ವ್ಯವಸ್ಥೆ ಮಾಡಿಸಿದ್ದಾರೆ.