ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ‘ಬಿಗ್ ಬಾಸ್’ ಸೀಸನ್ 4 ರಲ್ಲಿ, ಮೊದಲ ವಾರ ಬಿಗ್ ಬಾಸ್ ಮನೆಯಿಂದ, ಹೊರಗೆ ಹೋಗೋದ್ಯಾರು ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.
ಕಳೆದ ಭಾನುವಾರವಷ್ಟೇ ಶೋ ಆರಂಭವಾಗಿದ್ದು, ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಪ್ರಥಮ್, ವಾಣಿಶ್ರೀ, ಭುವನ್, ಸಂಜನಾ ಹಾಗೂ ದೊಡ್ಡ ಗಣೇಶ್ ಅವರು ನಾಮಿನೇಟ್ ಆಗಿದ್ದರು. ಅವರಲ್ಲಿ ಕ್ಯಾಪ್ಟನ್ ಕೀರ್ತಿಗೆ ನೀಡಿದ ವಿಶೇಷ ಅಧಿಕಾರದಿಂದ ದೊಡ್ಡಗಣೇಶ್ ಉಳಿದುಕೊಂಡಿದ್ದಾರೆ. ಉಳಿದ ನಾಲ್ವರಲ್ಲಿ ಯಾರು ಮೊದಲ ವಾರ ಮನೆ ಖಾಲಿ ಮಾಡುತ್ತಾರೆ ನೋಡಬೇಕಿದೆ.
ಸಂಜನಾ, ಪ್ರಥಮ್, ವಾಣಿಶ್ರೀ, ಭುವನ್ ನಾಮಿನೇಟ್ ಆಗಿದ್ದು, ಅವರಲ್ಲಿ ಎಲಿಮಿನೇಟ್ ಆಗೋದ್ಯಾರು ಎಂಬುದೇ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.