ಇಂದೋರ್ ನಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲ್ಯಾಂಡ್ ಮೂರನೇ ಟೆಸ್ಟ್ ನ ಮೂರನೇ ದಿನ ಸ್ಪಿನ್ ಮಾಂತ್ರಿಕ ಅಶ್ವಿನ್ ಮೋಡಿ ಮಾಡಿದ್ದಾರೆ. ಅಶ್ವಿನ್ ದಾಳಿಗೆ ನ್ಯೂಜಿಲ್ಯಾಂಡ್ 299 ರನ್ ಗಳಿಗೆ ತನ್ನೆಲ್ಲ ವಿಕೆಟ್ ಒಪ್ಪಿಸಿದೆ. ಆರು ವಿಕೆಟ್ ಕಬಳಿಸಿರುವ ಅಶ್ವಿನ್, ನ್ಯೂಜಿಲ್ಯಾಂಡ್ ಆಟಗಾರರು ಪೆವಿಲಿಯನ್ ಪರೇಡ್ ಮಾಡಲು ಕಾರಣರಾದ್ರು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 276 ರನ್ ಗಳ ಮುನ್ನಡೆ ಸಾಧಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿ ದಿನದಾಟ ಮುಗಿಸಿದೆ. 20ನೇ ಬಾರಿ ಐದು ವಿಕೆಟ್ ಕಬಳಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವಿನ್, ನ್ಯೂಜಿಲ್ಯಾಂಡ್ ಗೆ ನೀಡಿದ್ದು ಕೇವಲ 81 ರನ್ ಮಾತ್ರ. ರವೀಂದ್ರ ಜಡೇಜಾ ಕೂಡ ಎರಡು ವಿಕೆಟ್ ಪಡೆದು ಭಾರತಕ್ಕೆ ನೆರವಾದ್ರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿತು. ಭಾರತಕ್ಕೆ ತಕ್ಕ ಉತ್ತರ ನೀಡಲು ಮುಂದಾಗಿತ್ತು. ಜೇಮ್ಸ್ ನೀಶಾಮ್ 71 ಹಾಗೂ ಮಾರ್ಟಿನ್ ಗಪ್ಟಿಲ್ 72 ರನ್ ಗಳಿಸಿದ್ರು. ಆದ್ರೆ ಭೋಜನ ವಿರಾಮದ ನಂತ್ರ ಮೈದಾನದಲ್ಲಿ ನೆಲೆ ನಿಲ್ಲಲು ನ್ಯೂಜಿಲ್ಯಾಂಡ್ ಆಟಗಾರರು ವಿಫಲರಾದ್ರು.