ವಿಶ್ವಮಟ್ಟದಲ್ಲಿ ಸುದ್ದಿ ಮಾಡಿದ ಟೆಲಿಕಾಮ್ ಕಂಪನಿ ರಿಲಾಯನ್ಸ್ ಜಿಯೋ. ಆರಂಭದಲ್ಲಿ ಭರ್ಜರಿ ಆಫರ್ ನೀಡುವ ಮೂಲಕ ದಾಖಲೆಗಳ ಮೇಲೆ ದಾಖಲೆ ಮಾಡ್ತಿದೆ.ಕಂಪನಿ ಆರಂಭವಾಗಿ ಮೊದಲ ತಿಂಗಳಲ್ಲಿಯೇ 1.6 ಕೋಟಿ ಗ್ರಾಹಕರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಇದೊಂದು ವಿಶ್ವ ದಾಖಲೆ.
ಅತಿ ವೇಗದಲ್ಲಿ ಯಶಸ್ಸುಗಳಿಸಿದ ಕಂಪನಿ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ವಿಶ್ವ ಮಟ್ಟದ ಟೆಲಿಕಾಂ ಕಂಪನಿಯಾಗ್ಲಿ, ಇಲ್ಲ ಸಾಮಾಜಿಕ ಜಾಲತಾಣವಾಗ್ಲಿ ಈವರೆಗೂ ಆರಂಭದಲ್ಲಿಯೇ ಇಷ್ಟು ಪ್ರಸಿದ್ಧಿ ಪಡೆದಿಲ್ಲ. ಫೇಸ್ಬುಕ್, ವಾಟ್ಸ್ ಅಪ್, ಸ್ಪೈಕ್ ಯಾವುದೂ ಕೂಡ ಜಿಯೋನಷ್ಟು ವೇಗವಾಗಿ ಬೆಳೆದಿಲ್ಲ.
ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ನೇತೃತ್ವದಲ್ಲಿ ರಿಲಾಯನ್ಸ್ ಜಿಯೋ 4ಜಿ ಸೇವೆಯನ್ನು ಸೆಪ್ಟೆಂಬರ್ ನಲ್ಲಿ ಶುರುಮಾಡಿತ್ತು. ಭಾರತೀಯ ಮಾರುಕಟ್ಟೆಯನ್ನು ಈಗಷ್ಟೇ ಪ್ರವೇಶ ಮಾಡಿರುವ ಜಿಯೋ ಕಂಪನಿ ಪ್ರಕಾರ ಮಾರುಕಟ್ಟೆ ಪ್ರವೇಶ ಮಾಡಿ 26 ದಿನಗಳಲ್ಲಿಯೇ 1.6 ಕೋಟಿ ಗ್ರಾಹಕರನ್ನು ಹೊಂದಿದೆಯಂತೆ. 10 ಕೋಟಿ ಗ್ರಾಹಕರನ್ನು ಹೊಂದುವ ಗುರಿಯೊಂದಿಗೆ ಜಿಯೋ ಮುನ್ನುಗ್ಗುತ್ತಿದೆ.