ಖಾಸಗಿ ಟೆಲಿಕಾಂ ಸಂಸ್ಥೆಗಳೊಂದಿಗೆ ಪೈಪೋಟಿಗೆ ಸಜ್ಜಾಗಿರುವ ಬಿಎಸ್ಎನ್ಎಲ್ ತನ್ನ ಡೇಟಾ ಸಾಮರ್ಥ್ಯವನ್ನು ದುಪ್ಪಟ್ಟು ಮಾಡ್ತಿದೆ, ತಿಂಗಳಿಗೆ 600 ಟೆರ್ರಾ ಬೈಟ್ ಗಳಿಗೆ ಹೆಚ್ಚಿಸುತ್ತಿದೆ.
ಬಿಎಸ್ಎನ್ಎಲ್ ನೆಟ್ವರ್ಕ್ ನಿಂದ ಮೊಬೈಲ್ ಡೇಟಾ ಬಳಸುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಹಾಗಾಗಿ ದಕ್ಷಿಣದಲ್ಲಿ ಬಿಎಸ್ಎನ್ಎಲ್ ಡೇಟಾ ಸ್ಪೀಡ್ 600 ಟಿಬಿ ಆಗಲಿದೆ. ಉಳಿದ ವಲಯಗಳಲ್ಲಿ ನವೆಂಬರ್ ವೇಳೆಗೆ 450 ಟಿಬಿಗೆ ತಲುಪಲಿದೆ.
ಬೇಡಿಕೆ ಹೆಚ್ಚಾಗಿರುವುದರಿಂದ ಬಿಎಸ್ಎನ್ಎಲ್ 1099 ರೂಪಾಯಿಗೆ ಅನ್ ಲಿಮಿಟೆಡ್ 3ಜಿ ಇಂಟರ್ನೆಟ್ ಸೇವೆಯನ್ನು ಕೂಡ ಲಾಂಚ್ ಮಾಡಿದೆ. ಇದರಲ್ಲಿ 30 ದಿನಗಳವರೆಗೆ ಯಾವುದೇ ಸ್ಪೀಡ್ ನಿರ್ಬಂಧವಿಲ್ಲದೆ 3ಜಿ ಇಂಟರ್ನೆಟ್ ಬಳಸಬಹುದು. 2012 ರಲ್ಲಿ 80 ಟಿಬಿ ಯಷ್ಟಿದ್ದ ಬಿಎಸ್ಎನ್ಎಲ್ ಡೇಟಾ ಸಾಮರ್ಥ್ಯ ಈಗಾಗ್ಲೇ 353 ಟಿಬಿಗೆ ಬಂದು ತಲುಪಿದೆ. ಹೊಸ ಯೋಜನೆಯಂತೆ ಪ್ರತಿ ಗ್ರಾಹಕ ತಿಂಗಳಿಗೆ 66 ಜಿಬಿ ಇಂಟರ್ನೆಟ್ ಬಳಸಬಹುದು. ಖಾಸಗಿ ಟೆಲಿಕಾಂ ಕಂಪನಿಗಳು 7 ರಿಂದ 11 ಜಿಬಿ ಡೌನ್ ಲೋಡ್ ಲಿಮಿಟ್ ನಿಗದಿಪಡಿಸಿವೆ.