ಶಾರೂಕ್ ಖಾನ್ ಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಕಿಂಗ್ ಖಾನ್. ಯುರೋಪ್ ನಲ್ಲೂ ಎಸ್ ಆರ್ ಕೆ ಗೆ ದೊಡ್ಡ ಅಭಿಮಾನಿ ಬಳಗವಿದೆ.
ಇದೀಗ ಟರ್ಕಿಯ ಅಭಿಮಾನಿ ಸಂಘವೊಂದು ಶಾರೂಕ್ ಖಾನ್ ರ ಮುಂಬೈ ನಿವಾಸ ‘ಮನ್ನತ್’ ಹೆಸರಲ್ಲಿ ಕೆಫೆಯೊಂದನ್ನು ಆರಂಭಿಸಿದೆ. ಅದರ ಹೆಸರು ‘ಮನ್ನತ್ ಲ್ಯಾಂಡ್ಸ್ ಎಂಡ್ ಕೆಫೆ’. ಶಾರೂಕ್ ಮನೆಯ ಹೆಸರಲ್ಲಿ ಕೆಫೆ ಆರಂಭಿಸಿರುವ ಬಗ್ಗೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲೂ ಪೋಸ್ಟ್ ಮಾಡಲಾಗಿದೆ.
ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಚಿರಋಣಿ ಎಂದಿರುವ ಶಾರೂಕ್, ಎಲ್ಲರೂ ಆ ಕೆಫೆಗೆ ಹೋಗಿ ಕಾಫಿ ಹೀರುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಕಾಫಿ ಮಗ್ ಗಳ ಮೇಲೆ ಆಟೋಗ್ರಾಫ್ ಕೊಡುವುದಾಗಿಯೂ ಹೇಳಿದ್ದಾರೆ.