ಥಾಣೆ: ಒಂಟಿ ಮಹಿಳೆಯನ್ನು ಬೆದರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ, ಥಾಣೆಯ ಕಾಲ್ವಾ ಎಂಬಲ್ಲಿ ನಡೆದಿದೆ. ಜೈಭೀಮ್ ನಗರದ ಮನೆಯಲ್ಲಿ ಮಹಿಳೆ ಮಲಗಿದ್ದು, ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ.
ಈಕೆ 2 ಮಕ್ಕಳ ತಾಯಿಯಾಗಿದ್ದು, ಪತಿಯಿಂದ ದೂರವಾಗಿ 4 ವರ್ಷಗಳಿಂದ ಬೇರೆ ವಾಸವಾಗಿದ್ದಾಳೆ. ರಾತ್ರಿ ವೇಳೆ ಮನೆಗೆ ನುಗ್ಗಿದ ವಿಶಾಲ್ ಗೋಪಿಚಂದ್ ಮತ್ತು ವಿಕಾಸ್ ಎಂಬ ಯುವಕರು, ಚಾಕು ತೋರಿಸಿ ಬೆದರಿಸಿದ್ದಾರೆ. ಒಪ್ಪದಿದ್ದರೆ ಪಕ್ಕದಲ್ಲಿ ಮಲಗಿರುವ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಸಿ ಆ ನಂತರದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವಿವಾಹಿತೆ ಮಾರನೇ ದಿನ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೇ 28ರವರೆಗೆ ಪೊಲೀಸ್ ವಶಕ್ಕೆ ಆರೋಪಿಗಳನ್ನು ಒಪ್ಪಿಸಲಾಗಿದೆ ಎಂದು ಹೇಳಲಾಗಿದೆ.