ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಿಟ್ ಆಗಿರುವ ‘ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿ ಪಾಕಿಸ್ತಾನದ ನಟ ಫವಾದ್ ಖಾನ್ ಕೂಡ ಅಭಿನಯಿಸಿದ್ರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾತ್ರದಲ್ಲಿ ಫವಾದ್ ಕಾಣಿಸಿಕೊಂಡಿದ್ರು.
ಆದ್ರೆ ರಿಲೀಸ್ ಗೂ ಮುನ್ನವೇ ಫವಾದ್ ಅಭಿನಯಿಸಿದ್ದ ಭಾಗವನ್ನು ಕತ್ತರಿಸಿ ಹಾಕಲಾಗಿದೆ. ಇಡೀ ಚಿತ್ರದಲ್ಲೆಲ್ಲೂ ಫವಾದ್ ಸುಳಿವೇ ಇಲ್ಲ. ಕೊಹ್ಲಿ ಹಾಗೂ ಧೋನಿ ನಡುವಣ ಸಮೀಕರಣ ಚಿತ್ರದ ಅವಿಭಾಜ್ಯ ಅಂಗವಾಗಿತ್ತು. ಸಿನಿಮಾ ಬಿಡುಗಡೆಗೂ ಒಂದು ವಾರ ಮೊದಲು ಫವಾದ್, ಕೊಹ್ಲಿ ಪಾತ್ರದಲ್ಲಿ ನಟಿಸಿದ್ರು.
ಆದ್ರೆ ಅದರ ಬೆನ್ನಲ್ಲೇ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದ ಬಳಿಕ ಪಾಕ್ ನಟರ ಬಗ್ಗೆ ಚರ್ಚೆ ತಾರಕಕ್ಕೇರಿತ್ತು. ಪಾಕ್ ನಟರಿಗೆ ನಿಷೇಧ ಹೇರುವುದರ ಜೊತೆಗೆ ಅವರು ನಟಿಸಿರುವ ಸಿನಿಮಾಗಳನ್ನೂ ನಿಷೇಧಿಸುವಂತೆ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಕೂಡಲೇ ಭಾರತ ತೊರೆಯುವಂತೆ ಪಾಕಿಸ್ತಾನ ಕಲಾವಿದರಿಗೆ ಎಂಎನ್ಎಸ್ ಎಚ್ಚರಿಕೆ ನೀಡಿತ್ತು. ಹಾಗಾಗಿ ಸಿನಿಮಾಕ್ಕೆ ನೆಗೆಟಿವ್ ಪಬ್ಲಿಸಿಟಿ ಮತ್ತು ವಿವಾದ ಬೇಡ ಎಂದುಕೊಂಡ ನಿರ್ದೇಶಕ ನೀರಜ್ ಪಾಂಡೆ ಕೊನೆ ಕ್ಷಣದಲ್ಲಿ ಫವಾದ್ ಪಾತ್ರಕ್ಕೆ ಕತ್ತರಿ ಹಾಕಿದ್ದಾರೆ. ಚಿತ್ರ ರಿಲೀಸ್ ಆಗುವವರೆಗೂ ಫವಾದ್ ಖಾನ್ ಗೆ ಈ ವಿಚಾರ ಗೊತ್ತೇ ಇರಲಿಲ್ಲವಂತೆ.