ತಿರುಪತಿ: ವಿಶ್ವದ ಶ್ರೀಮಂತ ದೇವರೆಂದೇ ಕರೆಯಲ್ಪಡುವ ತಿರುಪತಿ ತಿರುಮಲ ದೇವಾಲಯಕ್ಕೆ, ಅಪಾರ ಸಂಖ್ಯೆ ಭಕ್ತರು ಭೇಟಿ ಕೊಡುತ್ತಾರೆ. ಭಕ್ತರು, ರೈಲು, ಬಸ್, ಇತರೆ ವಾಹನಗಳಲ್ಲಿ ಬಂದು ಹೋಗುವುದು ಸಾಮಾನ್ಯ.
ತಿರುಪತಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಭಕ್ತರು ಕೂಡ ವಿಮಾನದಲ್ಲಿ ಬಂದು ಹೋಗಬಹುದಾಗಿದೆ. ಆಂಧ್ರಪ್ರದೇಶದ ಮೂಲಸೌಕರ್ಯ ಹಾಗೂ ಬಂಡವಾಳ ಹೂಡಿಕೆ ಇಲಾಖೆ ಪ್ರಧಾನಕಾರ್ಯದರ್ಶಿ ಅಜಯ್ ಜೈನ್ ಅವರು ವಿಜಯವಾಡದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ತಿರುಪತಿಯಿಂದ ಮಧ್ಯಪ್ರಾಚ್ಯ ದೇಶಗಳಿಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ತಿರುಪತಿಯಲ್ಲಿ ವಿಮಾನ ನಿಲ್ದಾಣದ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಲಿವೆ. ಜೂನ್ ಕೊನೆಗೆ ತಿರುಪತಿಯಿಂದ ವಿಮಾನಗಳ ಸಂಚಾರ ಆರಂಭವಾಗಲಿದೆ ಎಂದು ಅಜಯ್ ಜೈನ್ ಹೇಳಿದ್ದಾರೆ.