ರಾಜಸ್ತಾನದ ಬಿಕನೇರ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಸಿ ಎರಚಿದ್ದಾರೆ. ಸ್ಥಳೀಯ ಆಮ್ ಆದ್ಮಿ ನಾಯಕನ ಮನೆಯಲ್ಲಿದ್ದ ಶೋಕ ಸಭೆಯಲ್ಲಿ ಪಾಲ್ಗೊಳ್ಳಲು ಕೇಜ್ರಿವಾಲ್ ಬಿಕನೇರ್ ಗೆ ಆಗಮಿಸಿದ್ದರು.
ಸಭೆ ಮುಗಿಸಿ ಹೊರಬರುತ್ತಿದ್ದಾಗ ಇಬ್ಬರು ವಿದ್ಯಾರ್ಥಿಗಳು ಕೇಜ್ರಿವಾಲ್ ಅವರ ಮೇಲೆ ಶಾಯಿ ಎರಚಿದ್ದಾರೆ. ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ಎನ್ನಲಾಗ್ತಾ ಇದೆ. ಸರ್ಜಿಕಲ್ ದಾಳಿ ಬಗ್ಗೆ ಸಾಕ್ಷ್ಯ ಕೊಡಿ ಅಂತಾ ಕೇಜ್ರಿವಾಲ್ ಮೋದಿ ಅವರನ್ನು ಆಗ್ರಹಿಸಿದ್ದರಿಂದ ಕೋಪಗೊಂಡು ಮಸಿ ಎರಚಿದ್ದಾರೆ.
ಇವರು ಆರ್ ಎಸ್ ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಸೇರಿದವರು ಎನ್ನಲಾಗ್ತಾ ಇದೆ. ಕೇಜ್ರಿವಾಲ್ ಮೇಲೆ ಮಸಿ ಹಾಕಿದ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಘಟನೆ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್, ನನ್ನ ಮೇಲೆ ಮಸಿ ಎರಚಿದವರಿಗೆ ಭಗವಂತ ಒಳ್ಳೆಯದು ಮಾಡಲಿ ಅಂತಾ ಟ್ವೀಟ್ ಮಾಡಿದ್ದಾರೆ.