ಎಟಿಎಂನಿಂದ ನೀವು ಹಣ ಡ್ರಾ ಮಾಡುವವರಾಗಿದ್ದರೆ ನಿಮಗೆ ಈ ಸುದ್ದಿ ಬಹಳ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. ಎಟಿಎಂ ನನ್ನ ಬಳಿ ಇದೆ. ಪಿನ್ ಕೋಡ್ ಕೂಡ ಯಾರಿಗೂ ನೀಡಿಲ್ಲ. ಬ್ಯಾಂಕ್ ನಲ್ಲಿರುವ ನನ್ನ ಹಣ ಸೇಫ್ ಎಂದಿಕೊಂಡಿದ್ದವರು ಸ್ವಲ್ಪ ಜಾಗರೂಕರಾಗಿ. ಯಾಕೆಂದ್ರೆ, ಜಪಾನಿನ ರಾಜಧಾನಿ ಟೋಕಿಯೋದಲ್ಲಿ ನಕಲಿ ಎಟಿಎಂ ಸಿದ್ಧಪಡಿಸಿದ ಗ್ಯಾಂಗೊಂದು ಕೋಟಿ ಕೋಟಿ ಲೂಟಿ ಮಾಡಿದೆ. ಗ್ಯಾಂಗ್ 1.44 ಬಿಲಿಯನ್ ಯೆನ್ ( ಸುಮಾರು 90 ಕೋಟಿ) ದರೋಡೆ ಮಾಡಿದೆ.
ದೇಶದಾದ್ಯಂತ ಇರುವ ಎಟಿಎಂನಲ್ಲಿ ಬೇರೆ ಬೇರೆ ಸಮಯದಲ್ಲಿ ಹಣವನ್ನು ತೆಗೆಯಲಾಗಿದೆ. ಈ ಗ್ಯಾಂಗ್ ನಲ್ಲಿ ಸುಮಾರು 100 ಮಂದಿ ಇರಬಹುದೆಂದು ಪೊಲೀಸರು ಅಂದಾಜು ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ಒಂದು ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಡೇಟಾ ಬಳಸಿಕೊಂಡು ನಕಲಿ ಕಾರ್ಡ್ ತಯಾರಿಸಲಾಗಿದೆ.
1400 ಎಟಿಎಂನಿಂದ ಹಣವನ್ನು ತೆಗೆದಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದ 8 ಗಂಟೆಯೊಳಗೆ ಹಣವನ್ನು ತೆಗೆಯಲಾಗಿದೆ. ಪ್ರತಿ ಕಾರ್ಡ್ ಮೇಲೆ ಬ್ಯಾಂಕ್ ನ ಮಿತಿ ಇರುವುದರಿಂದ ಒಂದೊಂದು ಎಟಿಎಂನಿಂದ 60,000 ತೆಗೆಯಲಾಗಿದೆ. ಒಂದು ಬ್ಯಾಂಕ್ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.