ಹುಂಡೈ EON ಕಾರ್ ಖರೀದಿಸಿ ಫಜೀತಿ ಅನುಭವಿಸುತ್ತಿದ್ದವರೆಲ್ಲ ಕೊಂಚ ರಿಲ್ಯಾಕ್ಸ್ ಆಗಬಹುದು. ಯಾಕಂದ್ರೆ ಕಾರಿನಲ್ಲಿರುವ ತಾಂತ್ರಿಕ ದೋಷ ಕೊನೆಗೂ ಹುಂಡೈ ಮೋಟರ್ ಇಂಡಿಯಾ ಕಂಪನಿಯ ಗಮನಕ್ಕೆ ಬಂದಿದೆ.
ಹಾಗಾಗಿ ಸುಮಾರು 7000 ಹುಂಡೈ ಇಯಾನ್ ಕಾರುಗಳನ್ನು ವಾಪಸ್ ಪಡೆಯಲು ಕಂಪನಿ ನಿರ್ಧರಿಸಿದೆ. 2015ರ ಜನವರಿ 1 ರಿಂದ 31ರವರೆಗೆ ಒಟ್ಟು 7657 ಹುಂಡೈ ಇಯಾನ್ ಕಾರುಗಳನ್ನು ತಯಾರಿಸಲಾಗಿತ್ತು. ಅವುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.
ಕ್ಲಚ್ ಕೇಬಲ್ ಮತ್ತು ಬ್ಯಾಟರಿ ಕೇಬಲ್ ನಿಂದ ದುರ್ವಾಸನೆ ಬರುತ್ತಿದೆ. ಈ ಬಗ್ಗೆ ಗ್ರಾಹಕರಿಂದ ಹುಂಡೈಗೆ ಸಾಕಷ್ಟು ದೂರುಗಳು ಬಂದಿದ್ದವು. ಹಾಗಾಗಿ ಜನವರಿ 1ರಿಂದ 31ರವರೆಗೆ ತಯಾರಿಸಲಾಗಿದ್ದ ಎಲ್ಲ ಕಾರುಗಳನ್ನು ಹಿಂಪಡೆದು ಪರಿಶೀಲನೆ ನಡೆಸಲು ಹುಂಡೈ ಕಂಪನಿ ಮುಂದಾಗಿದೆ.
ಇದಕ್ಕಾಗಿ ಗ್ರಾಹಕರು ಹಣ ಕೊಡಬೇಕಾಗಿಲ್ಲ. ನೀವು ಕೂಡ ಈ ಅವಧಿಯಲ್ಲಿ ಹುಂಡೈ ಇಯಾನ್ ಕಾರು ಖರೀದಿಸಿದ್ದು, ದೋಷ ಕಂಡುಬಂದಿದ್ದಲ್ಲಿ ಅಧಿಕೃತ ಹುಂಡೈ ಡೀಲರ್ ಗಳನ್ನು ಸಂಪರ್ಕಿಸಿ.