ಬಿಸಿಸಿಐ ಟೆಸ್ಟ್ ಕ್ರಿಕೆಟ್ ಆಟಗಾರರ ಸಂಬಳವನ್ನು ಇತ್ತೀಚೆಗಷ್ಟೆ ದುಪ್ಪಟ್ಟು ಮಾಡಿದೆ. ಟೆಸ್ಟ್ ಕ್ರಿಕೆಟ್ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೂ 15 ಲಕ್ಷ ರೂಪಾಯಿ ಸಿಗಲಿದೆ. ಈ ಹಿಂದೆ ಆಟಗಾರರಿಗೆ 7 ಲಕ್ಷ ರೂಪಾಯಿ ಸಿಗ್ತಾ ಇತ್ತು. ಇದಲ್ಲದೆ ಬಿಸಿಸಿಐ ಆಟಗಾರರಿಗೆ ವಾರ್ಷಿಕ ಸಂಬಳವನ್ನು ನೀಡುತ್ತೆ. ಜನವರಿ-ಸೆಪ್ಟೆಂಬರ್ 2016ರ ವೇಳೆಯಲ್ಲಿ ಎಂ.ಎಸ್.ಧೋನಿಗಿಂತ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೆಚ್ಚಿನ ಸಂಬಳ ಪಡೆದಿದ್ದಾರೆ. 9 ತಿಂಗಳಲ್ಲಿ ಕೊಹ್ಲಿಗೆ 1.78 ಕೋಟಿ ರೂಪಾಯಿ ಸಂಬಳ ಸಿಕ್ಕಿದೆ.
ಧೋನಿ,ಕೊಹ್ಲಿ ಸೇರಿದಂತೆ ನಾಲ್ಕು ಆಟಗಾರರು 1 ಕೋಟಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಬಿಸಿಸಿಐ ಇಂಡಿಯಾ ತಂಡದ ಆಟಗಾರರನ್ನು ಎ,ಬಿ ಮತ್ತು ಸಿ ಗುಂಪಾಗಿ ವಿಂಗಡನೆ ಮಾಡಿದೆ. ಗ್ರೇಡ್ ಎನಲ್ಲಿ ಬರುವ ಆಟಗಾರರಿಗೆ 1 ಕೋಟಿ ರೂಪಾಯಿ,ಗ್ರೇಡ್ ಬಿ ಆಟಗಾರರಿಗೆ 50 ಲಕ್ಷ ಹಾಗೂ ಸಿ ಗ್ರೇಡ್ ಆಟಗಾರರಿಗೆ 25 ಲಕ್ಷ ರೂಪಾಯಿ ಸಂಬಳ ನೀಡಲಾಗ್ತಾ ಇದೆ. ಎ ಗ್ರೇಡ್ ನಲ್ಲಿ ಎಂ.ಎಸ್.ಧೋನಿ,ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ,ಅಶ್ವಿನ್ ಸೇರಿದ್ದಾರೆ.
ಇದಲ್ಲದೆ ಟೆಸ್ಟ್,ಏಕದಿನ ಹಾಗೂ ಟಿ-20 ಪಂದ್ಯವನ್ನಾಡುವ ಆಟಗಾರರಿಗೆ ಪ್ರತ್ಯೇಕ ಸಂಬಳ ನೀಡಲಾಗುತ್ತದೆ. ಇದು ಕೇವಲ ಬಿಸಿಸಿಐ ನೀಡುವ ಸಂಬಳದ ವಿವರ. ಇದನ್ನು ಬಿಟ್ಟು ಪ್ರಶಸ್ತಿ ಮೊತ್ತ,ಜಾಹೀರಾತು ಹಾಗೂ ಹೊರಗಿನಿಂದ ಆಟಗಾರರು ಗಳಿಸುವ ಮೊತ್ತ ಇದರಲ್ಲಿ ಸೇರ್ಪಡೆಯಾಗಿಲ್ಲ.