Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ನವರಾತ್ರಿಯಂದು ಮನೆಗೆ ತನ್ನಿ ಈ ನಾಲ್ಕು ವಸ್ತು

$
0
0
ನವರಾತ್ರಿಯಂದು ಮನೆಗೆ ತನ್ನಿ ಈ ನಾಲ್ಕು ವಸ್ತು

ದೇಶದೆಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ದೇವಿಯ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿಧಿ-ವಿಧಾನದ ಮೂಲಕ ಪೂಜೆಗಳನ್ನು ಮಾಡ್ತಿದ್ದಾರೆ. ಎಲ್ಲರ ಮನೆಯಲ್ಲೂ ಲಕ್ಷ್ಮಿ ನೆಲೆಸೋದಿಲ್ಲ. ಆಕೆಯನ್ನು ಒಲಿಸಿಕೊಳ್ಳಲು ಭಕ್ತನಾದವನು ಸಾಕಷ್ಟು ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಸ್ವಚ್ಛವಾದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಹಾಗೆ ಈ ನಾಲ್ಕು  ವಸ್ತುಗಳನ್ನು ನವರಾತ್ರಿಯಂದು ಮನೆಗೆ ತಂದು ಅರ್ಪಿಸಿದ್ರೆ ತಾಯಿ ಲಕ್ಷ್ಮಿ ಸಂತೃಪ್ತಳಾಗ್ತಾಳೆ.

ಕಮಲದ ಹೂ: ತಾಯಿ ಲಕ್ಷ್ಮಿ ಕಮಲದ ಹೂವಿನ ಮೇಲೆ ಕುಳಿತಿದ್ದಾಳೆ. ಲಕ್ಷ್ಮಿಯ ಪ್ರೀತಿಯ ಹೂಗಳಲ್ಲಿ ಕಮಲದ ಹೂ ಒಂದು. ಹಾಗಾಗಿ ನವರಾತ್ರಿಯಂದು ಅವಶ್ಯವಾಗಿ ಮನೆಗೆ ಕಮಲದ ಹೂವನ್ನು ತೆಗೆದುಕೊಂಡು ಬನ್ನಿ. ಕಮಲದ ಹೂ ಇರುವ ಯಾವುದೇ ಫೋಟೋವನ್ನು ನೀವು ಮನೆಯಲ್ಲಿ ಇಡಬಹುದು.

ಬಂಗಾರ ಅಥವಾ ಬೆಳ್ಳಿಯ ನಾಣ್ಯ : ಸಾಮಾನ್ಯವಾಗಿ ದೀಪಾವಳಿಯಲ್ಲಿ ಬಂಗಾರ ಅಥವಾ ಬೆಳ್ಳಿಯ ನಾಣ್ಯವನ್ನು ಮನೆಗೆ ತರುವುದು ಸಂಪ್ರದಾಯ. ಆದ್ರೆ ನವರಾತ್ರಿಯಲ್ಲೂ ಈ ನಾಣ್ಯಗಳನ್ನು ಮನೆಗೆ ತನ್ನಿ. ಗಣೇಶ ಅಥವಾ ಲಕ್ಷ್ಮಿಯ ಚಿತ್ರವಿರುವ ನಾಣ್ಯವನ್ನು ತರುವುದು ಒಳ್ಳೆಯದು.

ನವಿಲುಗರಿ: ತಾಯಿ ಸರಸ್ವತಿಯ ಕೃಪೆಗೆ ಪಾತ್ರರಾಗಬೇಕಾದಲ್ಲಿ ಮನೆಗೆ ನವಿಲುಗರಿ ತನ್ನಿ. ದೇವರ ಮನೆಯಲ್ಲಿ ಇದನ್ನು ಇಡಿ. ತಾಯಿ ಸರಸ್ವತಿಯ ವಾಹನ ನವಿಲು. ಹಾಗಾಗಿ ನವಿಲುಗರಿ ಮನೆಯಲ್ಲಿದ್ದರೆ ಸರಸ್ವತಿ ಪ್ರಸನ್ನಳಾಗ್ತಾಳೆ.

ಲಕ್ಷ್ಮಿಯ ಫೋಟೋ: ಮನೆಯಲ್ಲಿ ಲಕ್ಷ್ಮಿ ನೆಲೆ ನಿಲ್ತಾ ಇಲ್ಲ,ಆರ್ಥಿಕ ಸಮಸ್ಯೆ ಎದುರಾಗಿದೆ ಎಂದಾದಲ್ಲಿ ಈ ನವರಾತ್ರಿಯಂದು ಮನೆಗೆ ಲಕ್ಷ್ಮಿಯ ಫೋಟೋ ತನ್ನಿ. ಕಮಲದ ಮೇಲೆ ಕುಳಿತಿರುವ ಹಾಗೆ ಕೈನಿಂದ ನಾಣ್ಯಗಳನ್ನು ಬೀಳಿಸುತ್ತಿರುವ ಲಕ್ಷ್ಮಿ ಫೋಟೋವನ್ನು ಮನೆಯಲ್ಲಿಡಿ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>