ಸದ್ಯದಲ್ಲಿ ಎಲ್ಲ ನಿರೀಕ್ಷೆಗಳಿಗೆ ತೆರೆ ಬೀಳಲಿದೆ. ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಶ್ರೀದೇವಿ ನಂತ್ರ ಈಗ ಮಗಳು ಜಾನ್ಹವಿ ಕಪೂರ್ ಸರದಿ. ಯಸ್, ಜಾನ್ಹವಿ ಕಪೂರ್ ಬಾಲಿವುಡ್ ಗೆ ಕಾಲಿಡಲಿದ್ದಾಳೆ. ‘ಸಿದ್ಧತ್’ ಚಿತ್ರದ ಮೂಲಕ ಬಾಲಿವುಡ್ ವೃತ್ತಿ ಬದುಕು ಶುರುಮಾಡಲಿದ್ದಾಳೆ ಜಾನ್ಹವಿ.
ವರದಿಗಳ ಪ್ರಕಾರ, ‘ಸಿದ್ಧತ್’ ನಲ್ಲಿ ಜಾನ್ಹವಿಗೆ ವರುಣ್ ಧವನ್ ಜೋಡಿಯಾಗಲಿದ್ದಾನೆ. ಕರಣ್ ಜೋಹರ್ ಬ್ಯಾನರ್ ಧರ್ಮ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗ್ತಿರುವ ಈ ಚಿತ್ರಕ್ಕೆ ಸಾಜಿದ್ ಸಹ ನಿರ್ಮಾಪಕರಾಗಿದ್ದಾರೆ. ಈ ಮೊದಲೇ ವರುಣ್ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆದ್ರೆ ಹಿರೋಯಿನ್ ಹುಡುಕಾಟ ನಡೆಯುತ್ತಿತ್ತು. ಆಲಿಯಾ ಭಟ್ ಹೆಸರು ಕೂಡ ಕೇಳಿ ಬಂದಿತ್ತು. ಆದ್ರೀಗ ಜಾನ್ಹವಿಯನ್ನು ಫೈನಲ್ ಮಾಡಲಾಗಿದೆ.
ಚಿತ್ರವನ್ನು ಅಭಿಷೇಕ್ ವರ್ಮನ್ ನಿರ್ದೇಶನ ಮಾಡಲಿದ್ದಾರೆ. ಅಭಿಷೇಕ್, ಅರ್ಜುನ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ‘2 ಸ್ಟೇಟ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. 2017ರ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ. ‘ಜುಡುವಾ’ ಚಿತ್ರದ ನಂತ್ರ ವರುಣ್ ಈ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.