ಬೀಜಿಂಗ್: ವಿಶ್ವದಲ್ಲಿ ಉತ್ಪಾದಕತೆಯ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾದ ಚೀನಾ, ಮನುಷ್ಯರ ಮಾಂಸವನ್ನು ರಫ್ತು ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಕೋಳಿ, ಕುರಿ ಹಾಗೂ ದನದ ಮಾಂಸಗಳನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ದೇಶವೊಂದರ ವಿದೇಶಿ ವ್ಯವಹಾರದಲ್ಲಿ ಆಮದು ಮತ್ತು ರಫ್ತು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಚೀನಾದಿಂದ ದನದ ಮಾಂಸದ ಹೆಸರಿನಲ್ಲಿ ಮನುಷ್ಯರ ಮಾಂಸವನ್ನೇ ರಫ್ತು ಮಾಡಲಾಗುತ್ತಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಮಾಂಸ ಸಾಗಾಣೆಯ ಬೃಹತ್ ಕಂಪನಿಯೊಂದರಲ್ಲಿ ಮನುಷ್ಯರ ಮೃತ ದೇಹಗಳನ್ನು ಕತ್ತರಿಸಿ ಸಂಸ್ಕರಿಸಿ, ಟಿನ್ ಗಳಲ್ಲಿ ಸಂಗ್ರಹಿಸಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದನ್ನು ಚೀನಾ ಆಡಳಿತ ಅಲ್ಲಗಳೆದಿದೆ.