ತುಂಬಾ ಸಮಯ ತೆಗೆದುಕೊಂಡು ದೇವರು ಈ ಹುಡುಗಿಯನ್ನು ಸೃಷ್ಟಿ ಮಾಡಿದ್ದಾನೆನ್ನಿಸುತ್ತೆ. ಒಮ್ಮೆ ನೋಡಿದ್ರೆ ಮತ್ತೆ ನೋಡೋಣ, ಮಗದೊಮ್ಮೆ ನೋಡೋಣ ಎನ್ನಿಸುವಷ್ಟು ಸುಂದರವಾಗಿದ್ದಾಳೆ ಈಕೆ. ಬಾಹ್ಯ ಸೌಂದರ್ಯವೊಂದೇ ಮುಖ್ಯವಲ್ಲ. ಜೊತೆಗೆ ಉತ್ತಮ ನಡವಳಿಕೆ, ಸುಂದರ ಕಂಠ ಈಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಹಾಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದ್ದಾಳೆ.
ಈಕೆ ಹೆಸರು ಚೌ ಕ್ಸು ಯು. ದಕ್ಷಿಣ ಕೊರಿಯಾದ ತೈನಾನ್ ಬೆಡಗಿ ಈಕೆ. ಚೌ ಇನ್ನೂ ಓದುತ್ತಿದ್ದಾಳೆ. ಆಗ್ಲೇ ಸಾಕಷ್ಟು ಸುದ್ದಿ ಮಾಡಿದ್ದಾಳೆ. ತನ್ನ ಸೌಂದರ್ಯ ಹಾಗೂ ಇಂಪಾದ ಧ್ವನಿಯಿಂದ ಲಕ್ಷಾಂತರ ಮಂದಿಯ ಗಮನ ಸೆಳೆದಿದ್ದಾಳೆ.ಇಂಟರ್ ನೆಟ್ ನಲ್ಲಿ ಆಕೆ ಹಾಡಿದ ವಿಡಿಯೋವನ್ನು ಸಾಕಷ್ಟು ಮಂದಿ ಇಷ್ಟಪಟ್ಟಿದ್ದಾರೆ.
ಕೇ ಪಾಪ್ ಗರ್ಲ್ ಎಂದೇ ಸಾಮಾಜಿಕ ಜಾಲತಾಣದಲ್ಲಿ ಈಕೆಯನ್ನು ಕರೆಯಲಾಗ್ತಾ ಇದೆ. ಹಿಂದಿನ ವರ್ಷ ರಿಯಾಲಿಟಿ ಶೋ ವೊಂದರಲ್ಲೂ ಚೌ ಪಾಲ್ಗೊಂಡಿದ್ದಳು. ಹುಡುಗಿಯರ ಟ್ವೈಸ್ ಬ್ಯಾಂಡ್ ನ ಸದಸ್ಯೆ ಕೂಡ ಆಗಿದ್ದಾಳೆ ಚೌ. 2015ರಲ್ಲಿ ಬೆಸ್ಟ್ ನ್ಯೂಕಮರ್ ಫಿಮೇಲ್ ಆರ್ಟಿಸ್ಟ್ ಎಂಬ ಪ್ರಶಸ್ತಿ ಕೂಡ ಈಕೆಗೆ ಸಿಕ್ಕಿದೆ.