ಆಶ್ಚರ್ಯಪಡಬೇಡಿ. ಈ ಸುದ್ದಿ ಸತ್ಯ. ಚೀನಾ ಆಫ್ರಿಕಾದಿಂದ ಕತ್ತೆಗಳನ್ನು ಖರೀದಿಸಿದೆ. ಪ್ರತಿ ವರ್ಷ ಚೀನಾ ಆಫ್ರಿಕಾದಿಂದ ಲಕ್ಷಾಂತರ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಅಷ್ಟಕ್ಕೂ ಚೀನಾ ಕತ್ತೆಗಳನ್ನು ತೆಗೆದುಕೊಂಡು ಏನು ಮಾಡುತ್ತೆ ಅಂತಾ ನೀವು ಯೋಚನೆ ಮಾಡ್ತಿದ್ದೀರಾ ಅಂತಾ ನಮಗೆ ಗೊತ್ತು. ಕತ್ತೆ ಖರೀದಿ ಹಿಂದೆ ಬಲವಾದ ಕಾರಣವೊಂದಿದೆ.
ಪ್ರತಿ ವರ್ಷ ಚೀನಾಕ್ಕೆ 40 ಲಕ್ಷ ಕತ್ತೆಗಳು ಬೇಕಾಗುತ್ತವೆ. ಆಫ್ರಿಕಾದ ಬೇರೆ ಬೇರೆ ಪ್ರದೇಶಗಳಿಂದ ಚೀನಾ ಕತ್ತೆಗಳನ್ನು ಖರೀದಿ ಮಾಡುತ್ತದೆ. ಈ ಕತ್ತೆಗಳನ್ನು ಔಷಧಿ ತಯಾರಿಸಲು ಚೀನಾ ಬಳಸಿಕೊಳ್ಳುತ್ತದೆ. ಕತ್ತೆಯ ಚರ್ಮದಿಂದ ಚೀನಾ ಸಾಂಪ್ರದಾಯಿಕ ಔಷಧಿಯೊಂದನ್ನು ಸಿದ್ಧಪಡಿಸುತ್ತದೆ. ಚರ್ಮದಲ್ಲಿರುವ ಜಿಲಿಟನ್ ನಿಂದ ಟಿಸಿಎಂ ಹೆಸರಿನ ಔಷಧಿ ತಯಾರಿಸಲಾಗುತ್ತದೆ.
ಚೀನಾದಲ್ಲಿ ಈ ಔಷಧಿಗೆ ಭಾರೀ ಬೇಡಿಕೆ ಇದೆ. ಹಾಗಾಗಿ ಚೀನಾದಲ್ಲಿ 5 ಸಾವಿರ ಟನ್ ಔಷಧಿಯನ್ನು ಸಿದ್ಧಪಡಿಸಲಾಗುತ್ತದೆ. ಚಳಿ ಜ್ವರ, ರಕ್ತಹೀನತೆ, ನಿದ್ರಾಹೀನತೆಗೆ ಈ ಔಷಧಿಯನ್ನು ಬಳಸಲಾಗುತ್ತದೆ. ಫೇಸ್ ಕ್ರೀಂ ತಯಾರಿಸಲೂ ಇದನ್ನು ಬಳಸಲಾಗುತ್ತದೆ.