ಪತಿ ಹಾಗೂ ಬಾಯ್ ಫ್ರೆಂಡ್ ಗಲಾಟೆಯಲ್ಲಿ ಎರಡುವರೆ ವರ್ಷದ ಮಗುವೊಂದು ಅನಾಥವಾಗಿದೆ. ತಾಯಿ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾಳೆ. ಆಕೆ ದೂರವಾಣಿ ಸಂಖ್ಯೆ ಆಧಾರದ ಮೇಲೆ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ. ಮನಿಷಾ ಯಾದವ್ ಎಂಬಾಕೆ ಮೂಲತಃ ಮಧ್ಯಪ್ರದೇಶ ಸಾಗರದವಳು. ಆಕೆ 2012ರಲ್ಲಿ ಜೀತ್ರಾಮ್ ಯಾದವ್ ಎಂಬಾತನನ್ನು ಮದುವೆಯಾಗಿದ್ದಾಳೆ. ಮದುವೆಯಾದ ಒಂದು ವರ್ಷದಲ್ಲಿ ಮುದ್ದಾದ ಗಂಡು ಮಗುವೊಂದು ಜನಿಸಿದೆ. ಆದ್ರೆ ಜೀತ್ರಾಮ್ ಹೆಣ್ಣು ಮಕ್ಕಳ ಶೋಕಿಗೆ ಬಿದ್ದಿದ್ದನಂತೆ. ಹಾಗಾಗಿ ಆತನನ್ನು ಬಿಟ್ಟಿದ್ದಾಳೆ ಮನಿಷಾ. ನಂತ್ರ ತನ್ನ ಬಾಲ್ಯದ ಗೆಳೆಯ ಅನಿಸ್ ಯಾದವ್ ನನ್ನು ಫೆಸ್ಬುಕ್ ಮೂಲಕ ಸಂಪರ್ಕಿಸಿದ್ದಾಳೆ. ಆತನಿಗೆ ಎಲ್ಲ ವಿಷಯ ಹೇಳಿದ್ದಾಳೆ.
ಮನಿಷಾಳನ್ನು ತನ್ನ ಜೊತೆ ಇಟ್ಟುಕೊಳ್ಳಲು ಬಯಸಿದ ಆಕೆಯ ಗೆಳೆಯ ಮಗುವನ್ನು ನಿರಾಕರಿಸಿದ್ದಾನೆ. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮನಿಷಾ, ಚಿಕಿತ್ಸೆಗಾಗಿ ತಾಯಿಯನ್ನು ಕರೆದುಕೊಂಡು ಡಾಕ್ಟರ್ ಸಿಎಸ್ ವಾರ್ಗಲ್ ಬಳಿ ಬಂದಿದ್ದಾಳೆ. ಅಲ್ಲಿಯೇ ಮಗುವನ್ನು ಬಿಟ್ಟು ಪರಾರಿಯಾಗಿದ್ದಾಳೆ. ಡಾಕ್ಟರ್ ತುಂಬಾ ಒಳ್ಳೆಯವರು ಎನ್ನುವ ವಿಚಾರ ಗೊತ್ತಾಯ್ತು. ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ತಾರೆನ್ನುವ ಕಾರಣಕ್ಕೆ ಹೀಗೆ ಮಾಡ್ದೆ ಎನ್ನುತ್ತಿದ್ದಾಳೆ ಮನಿಷಾ.