ಎಷ್ಟೇ ಎತ್ತರದ ಸ್ಥಾನ ನೀಡಿದ್ರೂ ಪಾಕಿಸ್ತಾನಿಗಳು ತಮ್ಮ ನೀಚ ಬುದ್ದಿಯನ್ನು ಬಿಡೋದಿಲ್ಲ. ಇದಕ್ಕೆ ನಟ ಫವಾದ್ ಖಾನ್ ಉತ್ತಮ ಉದಾಹರಣೆ. ಹೊಟ್ಟೆಪಾಡಿಗಾಗಿ ಪಾಕ್ ನಿಂದ ಭಾರತಕ್ಕೆ ಬಂದು ಇಲ್ಲಿನವರ ಕರುಣೆ ಗಿಟ್ಟಿಸಿಕೊಂಡು ಒಂದಿಷ್ಟು ಚಿತ್ರ ಮಾಡಿದ ಈ ನಟ, ತನ್ನ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾನೆ.
ಪಾಕಿಸ್ತಾನಕ್ಕೆ ಮರಳಿದ ನಂತ್ರ ಭಾರತದ ವಿರುದ್ಧವೇ ದ್ವನಿ ಎತ್ತಿದ್ದಾನೆ. ನಿರ್ದೇಶಕರ ಮಂಡಳಿ ಪಾಕಿಸ್ತಾನಿ ಕಲಾಕಾರರನ್ನು ಬ್ಯಾನ್ ಮಾಡಿದೆ. ಈ ಸಂಬಂಧ ಮಾತನಾಡಿದ ಫವಾದ್ ಖಾನ್ , ಬಾಲಿವುಡ್ ಯಾರದ್ದೂ ಅಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾನಂತೆ. ಇದನ್ನು ನಿರ್ದೇಶಕ ಅಗರ್ವಾಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬಾಲಿವುಡ್ ಮಂದಿಯಿಂದ ನನ್ನ ಕಿವಿಗೆ ಈ ಸುದ್ದಿ ಬಂದಿದೆ. ನನ್ನ ವಿರುದ್ಧ ಫವಾದ್ ಈ ರೀತಿ ಮಾತನಾಡಿದ್ದಾನೆ. ಆದ್ರೆ ನಿರ್ಣಯ ತೆಗೆದುಕೊಂಡಿದ್ದು ನಾನೊಬ್ಬನೇ ಅಲ್ಲ ಎಂದಿದ್ದಾರೆ ಅಗರ್ವಾಲ್.
ಇಷ್ಟೇ ಅಲ್ಲ ಇನ್ನೊಂದು ಮೂಲದ ಪ್ರಕಾರ, ಭಾರತೀಯರ ಹೃದಯ ತುಂಬಾ ಚಿಕ್ಕದು ಎಂದಿದ್ದಾನಂತೆ ಫವಾದ್. ಅಲ್ಲಿಂದ ಇಲ್ಲಿಂದ ನಿರ್ದೇಶಕರ ಕಿವಿಗೆ ಒಂದೊಂದೇ ಸುದ್ದಿ ಬರ್ತಾ ಇದೆ. ಇದ್ರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ನಿರ್ದೇಶಕರಿಗೂ ತಿಳಿದಿಲ್ಲ. ಆದ್ರೆ ನಮ್ಮ ನೆಲದಲ್ಲಿಯೇ ತಿಂದುಂಡು ಈಗ ಪಾಕ್ ಗೆ ಹೋಗಿ ನಮ್ಮ ವಿರುದ್ಧವೇ ಫವಾದ್ ಮಾತನಾಡಿದ್ದು ಸತ್ಯ ಎಂದಾದ್ರೆ ಭಾರತೀಯರು ಸುಮ್ಮನಿರ್ತಾರಾ?