ಹೊಟ್ಟೆ ಸರಿಯಿಲ್ಲ ಎಂದಾಗ ವಾಂತಿ ಬರುತ್ತೆ. ಆದ್ರೆ ನಂಬೋದು ಕಷ್ಟವಾಗಬಹುದು. ವಾಂತಿ ವ್ಯಕ್ತಿಯೊಬ್ಬನ ಲಕ್ ಬದಲಾಯಿಸಿದೆ. ರಾತ್ರೋರಾತ್ರಿ ಆತನನ್ನು ಶ್ರೀಮಂತನನ್ನಾಗಿ ಮಾಡಿದೆ. ವಾಂತಿಯಿಂದ ಹೊರಬಿದ್ದ ವಸ್ತುವನ್ನು ಖರೀದಿಸಲು ವಿಶ್ವದ ಜನ ಸಾಲುಗಟ್ಟಿ ನಿಂತಿದ್ದಾರೆ.
ಯುನೈಟೆಡ್ ಕಿಂಗ್ಡಮ್ ನ 67 ವರ್ಷದ ಅಲೆನ್ ಡೆರಿಕ್ ಜೀವನದಲ್ಲಿ ಇಂತಹದ್ದೊಂದು ಚಮತ್ಕಾರ ನಡೆದಿದೆ. ಸಮುದ್ರ ತೀರದಲ್ಲಿ ತನ್ನ ಮಗನ ಜೊತೆ ಹೋಗ್ತಿದ್ದ ಅಲೆನ್ ಗೆ ಕೆಟ್ಟ ವಾಸನೆ ಬಂದಿದೆ. ಅದು ಯಾವ ವಾಸನೆ ಅಂತಾ ನೋಡಲು ಮುಂದಾದ ಅಲೆನ್ ಗೆ ತಿಮಿಂಗಲವೊಂದು ಮಾಡಿದ ವಾಂತಿ ಕಂಡಿದೆ.
ಅದನ್ನು ಸೂಕ್ಷ್ಮವಾಗಿ ನೋಡಿದ್ದಾನೆ ಅಲೆನ್. ಅದ್ರಲ್ಲೊಂದು ವಿಚಿತ್ರ ವಸ್ತು ಇರುವುದು ಕಂಡಿದೆ. ಅದನ್ನು ಕ್ಲೀನ್ ಮಾಡಿದಾಗ ಆ ವಸ್ತುವನ್ನು ಸುಗಂಧ ದ್ರವ್ಯ ತಯಾರಿಸಲು ಬಳಸ್ತಾರೆನ್ನುವುದು ಗೊತ್ತಾಗಿದೆ. ಇದೊಂದು ಅಪರೂಪದ ವಸ್ತುವಾಗಿದೆ. ಸೂರ್ಯನ ಕಿರಣ ಹಾಗೂ ಉಪ್ಪಿನಿಂದಾಗಿ ಇದು ಮೇಣದಂತೆ ಕಂಡುಬರುತ್ತದೆ. ಇದರ ಬೆಲೆ ಸುಮಾರು 52 ಲಕ್ಷಕ್ಕಿಂತಲೂ ಜಾಸ್ತಿ ಇದೆ.