ನವದೆಹಲಿ: ಉರಿ ಸೇನಾ ಕಚೇರಿ ಮೇಲೆ ನಡೆದ ದಾಳಿಯ ನಂತರ, ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಭಾರತ ಪ್ರಯತ್ನಿಸಿದ್ದು, ಈಗಾಗಲೇ ಸಿಂಧೂ ನದಿ ಒಪ್ಪಂದ ರದ್ದು ಮಾಡಲು ಕ್ರಮ ಕೈಗೊಂಡಿದೆ.
ಭಾರತ ಬಹಿಷ್ಕರಿಸಿದ ಕಾರಣಕ್ಕೆ ಪಾಕ್ ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಭೆ ರದ್ದಾಗಿದೆ. ಇದರಿಂದ ಉರಿದು ಹೋಗಿರುವ ಪಾಕ್ ರಕ್ಷಣಾ ಸಚಿವ ಖ್ವಾಜಾ ಮಹಮ್ಮದ್ ಆಸೀಫ್, ಭಾರತಕ್ಕೆ ಧಮ್ಕಿ ಹಾಕಿದ್ದಾರೆ. ನಮ್ಮಲ್ಲಿರುವ ನ್ಯೂಕ್ಲಿಯರ್ ಅಸ್ತ್ರಗಳು ಶೋ ಪೀಸ್ ಗಳಲ್ಲ. ಪಾಕಿಸ್ತಾನದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ನಾವು ಏನಾದರೂ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪಾಕ್ ಟಿ.ವಿ. ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಖ್ವಾಜಾ ಮಹಮ್ಮದ್ ಆಸೀಫ್, ಪಾಕಿಸ್ತಾನದ ಸುರಕ್ಷತೆಗೆ ಧಕ್ಕೆ ಆದರೆ ಅಣ್ವಸ್ತ್ರ ಪ್ರಯೋಗಿಸುತ್ತೇವೆ ಎಂದು ಬೆದರಿಕೆಯ ಮಾತುಗಳನ್ನಾಡಿದ್ದಾರೆ.