ರನ್ ವೇ ನಲ್ಲಿ ನಿಂತಿದ್ದ ವಿಮಾನಕ್ಕೆ ಹಿಂಬದಿಯಿಂದ ಬಂದ ಮತ್ತೊಂದು ವಿಮಾನ ಢಿಕ್ಕಿ ಹೊಡೆದಿದ್ದು, ದುರಂತ ಸ್ವಲ್ಪದರಲ್ಲೇ ತಪ್ಪಿದೆ.
ಕಳೆದ ವಾರ ಅಮೆರಿಕಾದ ನೆವಾಡದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರೆನೋ ನ್ಯಾಷನಲ್ ಚಾಂಪಿಯನ್ ಶಿಪ್ ಏರ್ ರೇಸ್ ನಲ್ಲಿ ಪಾಲ್ಗೊಂಡಿದ್ದ ಟಾಮ್ ರಿಚರ್ಡ್ ಎಂಬಾತನ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು,ರನ್ ವೇ ನಲ್ಲಿ ನಿಲ್ಲಿಸಿಕೊಂಡಿದ್ದಾನೆ.
ತನ್ನ ವಿಮಾನದಲ್ಲಿ ತಲೆದೋರಿದ ತಾಂತ್ರಿಕ ದೋಷದ ಕುರಿತು ಆತ ಮಾಹಿತಿ ನೀಡಿದ್ದರೂ ಸಿಬ್ಬಂದಿಗಳು ಮಾಡಿದ ಪ್ರಮಾದದಿಂದಾಗಿ ಹಿಂದಿನಿಂದ ಮತ್ತೊಂದು ವಿಮಾನದಲ್ಲಿ ಬರುತ್ತಿದ್ದ ಸ್ಪರ್ಧಿಗೆ ಸಕಾಲದಲ್ಲಿ ಮಾಹಿತಿ ತಲುಪಿಲ್ಲ. ಆತನ ವಿಮಾನ ವೇಗವಾಗಿ ಬಂದು ಟಾಮ್ ರಿಚರ್ಡ್ ನ ವಿಮಾನದ ಪಕ್ಕದಲ್ಲೇ ಹಾದುಹೋಗಿದೆ. ಈ ಸಂದರ್ಭದಲ್ಲಿ ಟಾಮ್ ರಿಚರ್ಡ್ ನ ವಿಮಾನದ ರೆಕ್ಕೆಗೆ ಹಾನಿಯಾಗಿದೆಯಲ್ಲದೇ ಆತನ ಕೈಗೂ ಅಲ್ಪಪ್ರಮಾಣದ ಪೆಟ್ಟಾಗಿದೆ.