ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಐಫೋನ್ 7 ಗೆ ಹೆಡ್ ಫೋನ್ ಹಾಕಲು ಸ್ಲಾಟ್ ಇಲ್ಲವೆನ್ನಲಾಗಿದ್ದು, ವೈರ್ ಲೆಸ್ ಏರ್ ಪಾಡ್ ಗಾಗಿ 159 ಡಾಲರ್ ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಿತ್ತು. ಹೀಗಾಗಿ TechRax ಈ ಕುರಿತು ಲೇವಡಿ ಮಾಡಲು ‘Secret Hack to Get Headphone Jack on the iPhone 7’ ಎಂಬ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು, ಇದನ್ನು ಈಗಾಗಲೇ 9 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಕೆಲವರು ಈ ವಿಡಿಯೋ ನಿಜವೆಂದು ನಂಬಿ ಹೆಡ್ ಫೋನ್ ಸ್ಲಾಟ್ ಗಾಗಿ ವಿಡಿಯೋದಲ್ಲಿ ತೋರಿಸಿದಂತೆ ತಮ್ಮ ಐಫೋನ್ 7 ಗೆ ಡ್ರಿಲ್ ಮಾಡಿ ಇಂಗು ತಿಂದ ಮಂಗನಂತಾಗಿದ್ದಾರೆ. ಹಲವರ ಫೋನ್ ಗಳು ಹಾಳಾಗಿವೆ. ತಮ್ಮ ಫೋನ್ ಹಾಳಾಗಿದ್ದರಿಂದ ಕೋಪಗೊಂಡ ಕೆಲವರು, ವಿಡಿಯೋ ಅಪ್ ಲೋಡ್ ಮಾಡಿದವನು ಎದುರಿಗೆ ಸಿಕ್ಕರೆ ನಾಲ್ಕು ಇಕ್ಕುವುದಾಗಿ ಬೆದರಿಕೆ ಹಾಕಿದ್ದಾರೆ.