ಅತೀ ಕಡಿಮೆ ದರದಲ್ಲಿ ಡಾಟಾ ಪ್ಯಾಕ್ ಗಳನ್ನು ನೀಡಿದ ರಿಲಾಯೆನ್ಸ್ ಜಿಯೋ ಇತರೆ ಟೆಲಿಕಾಂ ಕಂಪನಿಗಳಿಗೆ ದುಃಸ್ವಪ್ನವಾಗಿದ್ದು ಸುಳ್ಳಲ್ಲ. 4 ಜಿ ಸೌಲಭ್ಯದ ಮೂಲಕ ಗ್ರಾಹಕರನ್ನು ಹುಚ್ಚೆಬ್ಬಿಸಿದ ರಿಲಾಯೆನ್ಸ್ ಈಗ 5 ಜಿ ಬಿಡುಗಡೆಗೆ ತಯಾರಿ ಆರಂಭಿಸಿದೆ..!
ಆಶ್ಚರ್ಯವಾದರೂ ಇದು ಸುಳ್ಳಲ್ಲ. ಮುಂಬರುವ ದಿನಗಳಲ್ಲಿ 5 ಜಿ ಸೌಲಭ್ಯದಿಂದ ಟಿವಿ, ಫ್ಯಾನ್, ಬಾಗಿಲು, ಕಾರು ಎಲ್ಲವೂ ಸ್ಮಾರ್ಟ್ ಆಗಲಿದೆ. ಎಲ್ಲವೂ ಆಪ್ಟಿಕಲ್ ಲೈನ್ ಮೂಲಕ ಒಂದನ್ನೊಂದು ಬೆಸೆಯಲಿದೆ. ಅದರಿಂದ ನೀವು ಮೊಬೈಲ್ ನಿಂದಲೇ ಮನೆಯ ಎಲ್ಲ ವಸ್ತುಗಳನ್ನು ನಿಯಂತ್ರಿಸಬಹುದು.
5 ಜಿ ಸೇವೆಯಿಂದ ಮನೆಯ ಎಲ್ಲ ಫೋನ್ ಗಳಿಗೆ ಬರುವ ಕರೆಗಳನ್ನು ನಿಮ್ಮ ಮೊಬೈಲ್ ಗೆ ಟ್ರಾನ್ಸಫರ್ ಮಾಡಿಸಿಕೊಳ್ಳಬಹುದು. ಕಾರಿನಲ್ಲಿ ನೋಡುತ್ತಿರುವ ವಿಡಿಯೋವನ್ನು ಮನೆಗೆ ಬರುತ್ತಿದ್ದಂತೆ ಟಿವಿಯಲ್ಲಿ ನೋಡಬಹುದು. ಮನೆಯ ಲೈಟ್ ಗಳು ಕೂಡ ಹೊರಗಿನ ಬೆಳಕಿಗೆ ಅನುಗುಣವಾಗಿ ತಾನಾಗಿಯೇ ಬದಲಾಗುತ್ತದೆ. ಮೊಬೈಲ್ ಮೂಲಕವೇ ಮನೆಯ ಬಾಗಿಲು ತೆರೆದುಕೊಳ್ಳುತ್ತೆ. ಅಷ್ಟೇ ಅಲ್ಲ ಡೋರ್ ಬೆಲ್ ಆದಲ್ಲಿ ಹೊರಗಿನ ದೃಶ್ಯವನ್ನು ನೀವು ನಿಮ್ಮ ಮೊಬೈಲ್ ನಲ್ಲೇ ನೋಡಬಹುದು.
ಕಾರಿನ ಇಂಜಿನ್, ಇಂಧನ, ಉಷ್ಣತೆಯ ಕುರಿತಾದ ಮಾಹಿತಿಗಳನ್ನು ಫೋನ್ ನಲ್ಲಿ ನೋಡಬಹುದು. ಕಳ್ಳತನದ ಸಮಯದಲ್ಲಿ ಆ್ಯಪ್ ಮೂಲಕ ಕಾರನ್ನು ಡಿ-ಎಕ್ಟಿವೇಟ್ ಮಾಡಬಹುದಾಗಿದೆ. ಕಾರಿನಲ್ಲಿ ವೈ-ಫೈ ಸೌಲಭ್ಯ ಕೂಡ ಇರಲಿದ್ದು, 10 ಜನರು ಅದನ್ನು ಬಳಸಬಹುದಾಗಿದೆ. ಇದರಲ್ಲಿರುವ ‘ಜಿಯೋ ಮನಿ’ಯ ಸಹಾಯದಿಂದ ಹಲವು ಕಡೆ ನೀವು ಬಿಲ್ ಪಾವತಿಸಬಹುದು.
ಈ ಎಲ್ಲ ಸೌಲಭ್ಯಗಳನ್ನು ಹೊತ್ತು ತರಲಿರುವ 5 ಜಿಯ ಪರೀಕ್ಷೆ ಈಗಾಗಲೇ ಕೊನೆಯ ಹಂತ ತಲುಪಿದೆ. 2018 ರ ಹೊತ್ತಿಗೆ ಇದು ಸಾರ್ವಜನಿಕರಿಗೆ ಸಿಗಲಿದೆಯಂತೆ.