ಶ್ರೀಹರಿಕೋಟಾ : ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು 8 ಉಪಗ್ರಹಗಳನ್ನು ಹೊತ್ತ ಪಿ.ಎಸ್.ಎಲ್.ವಿ.-ಸಿ 35 ರಾಕೆಟ್ ಉಡಾವಣೆಗೊಂಡಿದೆ.
ಭಾರತದ 3 ಹಾಗೂ ವಿದೇಶದ 5 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು, ನಿಗದಿತ 2 ಕಕ್ಷೆಗಳನ್ನು ಇವು ಸೇರಲಿವೆ. ಇವುಗಳಲ್ಲಿ 1 ಉಪಗ್ರಹವನ್ನು ಬೆಂಗಳೂರಿನ PES ಕಾಲೇಜು ವಿದ್ಯಾರ್ಥಿಗಳು ಸಿದ್ಧಪಡಿಸಿರುವುದು ವಿಶೇಷವಾಗಿದೆ. ಹವಾಮಾನ, ಚಂಡಮಾರುತಗಳ ಕುರಿತಾದ ಮಾಹಿತಿಯನ್ನು ಸ್ಕಾಟ್ ಸ್ಯಾಟ್-1 ಉಪಗ್ರಹ ನೀಡಲಿದೆ.
ಭಾರತದ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದೇಶಿ ಉಪಗ್ರಹಗಳು ಧೃವೀಯ ಕಕ್ಷೆಯನ್ನು ಸೇರಲಿವೆ. ಅಮೆರಿಕ, ಕೆನಡಾ, ಅಲ್ಜಿರಿಯಾದ ಉಪಗ್ರಹಗಳು ಕೂಡ ಉಡಾವಣೆಗೊಂಡಿವೆ.