ಬೆಂಗಳೂರು: ಚೀನಾದ ಪ್ರತಿಷ್ಠಿತ ಎಫ್.ಎಂ.ಸಿ.ಜಿ. ಕಂಪನಿ ಜಾಂಗ್ ಶಾನ್ ಮರೆ ಈಗ ವಿಪ್ರೋ ತೆಕ್ಕೆಗೆ ಸೇರಿದೆ. ಚೀನಾ ಕಂಪನಿಯನ್ನು ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್ ಸಂಸ್ಥೆ ಸ್ವಾಧೀನಕ್ಕೆ ಪಡೆದುಕೊಂಡಿದೆ.
ವಿಪ್ರೋ ಸಂಸ್ಥೆಯ ಭಾಗವಾಗಿರುವ ವಿಪ್ರೋ ಸಿಂಗಾಪೂರ್ ಪ್ರೈವೇಟ್ ಲಿ. ಕಂಪನಿಯು ಜಾಂಗ್ ಶಾನ್ ಮರೆ ಕಂಪನಿಯ ಶೇ. 100 ರಷ್ಟು ಶೇರುಗಳನ್ನು ನಗದು ರೂಪದಲ್ಲಿ ಖರೀದಿಸಿರುವುದಾಗಿ ವಿಪ್ರೋ ಸಂಸ್ಥೆಯ ಸಿ.ಇ.ಓ. ವಿನೀತ್ ಅಗರ್ ವಾಲ್ ಅವರು ಮಾಹಿತಿ ನೀಡಿದ್ದಾರೆ. ವಿಪ್ರೋ ಕನ್ಸ್ಯೂಮರ್ ಕೇರ್ ಅಂಡ್ ಲೈಟಿಂಗ್ ಸಂಸ್ಥೆಯ ಆಗ್ನೇಯ ಏಷ್ಯಾದಲ್ಲಿರುವ ವಿಪ್ರೋ ಉಂಜ ಕಂಪನಿಯ ವರಮಾನ 74 ಕೋಟಿ ರೂ.ನಷ್ಟಿತ್ತು.
ಇದರ ತೆಕ್ಕೆಗೆ ಚೀನಾ ಕಂಪನಿ ಬಂದ ನಂತರ, 1,005 ಕೋಟಿ ರೂಪಾಯಿಗೆ ವರಮಾನ ಹೆಚ್ಚಳವಾಗಲಿದೆ. ಚೀನಾ ಕಂಪನಿಯ ಬ್ರಾಂಡ್ ಮತ್ತು ಉದ್ಯೋಗಿಗಳು ವಿಪ್ರೋ ಕಂಪನಿ ಸೇರಲಿದ್ದಾರೆ. ಆದರೆ, ಚೀನಾ ಕಂಪನಿಯ ತಯಾರಿಕಾ ಘಟಕ ಪಡೆದುಕೊಂಡಿಲ್ಲ. ನಮ್ಮ ಸಂಸ್ಥೆಯ ಉತ್ಪನ್ನಗಳ ತಯಾರಿಕೆಗೆ ಚೀನಾದಲ್ಲಿ 2 ಘಟಕ ಹೊಂದಿರುವುದಾಗಿ ವಿನೀತ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ.