ಮನೆ, ವಾಹನವೊಂದೆ ಅಲ್ಲ ಇತ್ತೀಚಿನ ದಿನಗಳಲ್ಲಿ ಬಾಡಿಗೆಗೆ ಎಲ್ಲವೂ ಸಿಗ್ತಾ ಇದೆ. ಬಾಡಿಗೆ ಅಮ್ಮ, ಬಾಡಿಗೆ ಮಗು ಹೀಗೆ ಬಾಡಿಗೆ ಗಂಡ ಕೂಡ ಸಿಗ್ತಾನೆ. ಜಪಾನ್ ನಲ್ಲಿ ಬಾಡಿಗೆ ಬಾಯ್ ಫ್ರೆಂಡ್ ಉದ್ಯಮ ಜೋರಾಗಿ ನಡೆಯುತ್ತಿದೆ. ಹುಡುಗಿಯರು ಬಾಡಿಗೆಗೆ ಹುಡುಗರನ್ನು ಪಡೆಯುತ್ತಿದ್ದಾರೆ.
ಗಂಟೆ ಅಥವಾ ದಿನದ ಲೆಕ್ಕದಲ್ಲಿ ಹುಡುಗರನ್ನು ಹುಡುಗಿಯರು ಬಾಡಿಗೆಗೆ ಪಡೆಯುತ್ತಾರೆ. ಹುಡುಗರನ್ನು ಆಯ್ಕೆ ಮಾಡಿಕೊಳ್ಳುವುದು ಹುಡುಗಿಯರಿಗೆ ಬಿಟ್ಟಿದ್ದು. ಬುಕ್ ಮಾಡಿದ ಸಮಯದಿಂದ ಬಾಡಿಗೆ ಹಣ ನೀಡಬೇಕಾಗುತ್ತದೆ. ಒಂಟಿಯಾಗಿ ವಾಸಿಸುವ ಹುಡುಗಿಯರು ಇದಕ್ಕೆ ಸಾಕಷ್ಟು ಆಕರ್ಷಿತರಾಗಿದ್ದಾರೆ. ಕೆಲಸ ಮಾಡಿ ಸುಸ್ತಾಗಿರುವ, ಸ್ವಲ್ಪ ರೆಸ್ಟ್ ಬೇಕು ಎನ್ನುವ ಮಹಿಳೆಯರು ಬಾಡಿಗೆಗೆ ಹುಡುಗರನ್ನು ಪಡೆಯುತ್ತಿದ್ದಾರೆ.
ಈ ಹುಡುಗ್ರು ಅಡುಗೆ ಮಾಡುವುದರಿಂದ ಹಿಡಿದು ಎಲ್ಲ ಕೆಲಸವನ್ನೂ ಮಾಡಿ ಕೊಡ್ತಾರೆ. 30-40 ವರ್ಷದ ಮಹಿಳೆಯರು 20-30 ವರ್ಷದೊಳಗಿನ ಹುಡುಗರನ್ನು ಬಾಡಿಗೆಗೆ ಪಡೆಯುತ್ತಿರುವುದು ಜಾಸ್ತಿಯಾಗಿದೆ.