ಮೀರತ್ ನಲ್ಲಿ ಮಹಾತಾಯಿಯೊಬ್ಬಳು ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದ್ರಲ್ಲಿ ಎರಡು ಹೆಣ್ಣು ಶಿಶು ಹಾಗೂ ಎರಡು ಗಂಡು ಮಗು. ಇದ್ರಲ್ಲಿ ಗಂಡು ಶಿಶುವೊಂದು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ. ಉಳಿದ ಮೂರು ಮಕ್ಕಳಿಗೆ ಚಿಕಿತ್ಸೆ ನೀಡಲಾಗ್ತಾ ಇದೆ.
ಮೀರತ್ ನ ಪಲ್ಲವಪುರಂ ಠಾಣಾ ವ್ಯಾಪ್ತಿಯ ಮನೀಶ್ ಎಂಬಾತನ ಮದುವೆ ನಾಲ್ಕು ವರ್ಷಗಳ ಹಿಂದೆ ಜ್ಯೋತಿ ಜೊತೆ ನಡೆದಿತ್ತು. ನಾಲ್ಕು ವರ್ಷಗಳಾದ್ರೂ ಮಕ್ಕಳಾಗದ ಕಾರಣ ಮನೀಶ್ ಹಾಗೂ ಜ್ಯೋತಿ ಮೀರತ್ ವೈದ್ಯರೊಬ್ಬರ ಬಳಿ ಚಿಕಿತ್ಸೆ ಪಡೆದಿದ್ದರು. ನಂತ್ರ ಗರ್ಭ ನಿಂತಿತ್ತು. ಏಳು ತಿಂಗಳ ನಂತ್ರ ಜ್ಯೋತಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಸ್ತ್ರಚಿಕಿತ್ಸೆ ಮಾಡಿ ಶಿಶುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಿದ್ದು, ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಸಂಬಂಧಿಕರ ಸಂಖ್ಯೆ ಹೆಚ್ಚಾಗ್ತಿದೆ.