ಪುಣೆ ಪೊಲೀಸರಿಗೆ ರಸ್ತೆ ಬಳಿ ಬಿದ್ದಿದ್ದ ಪರ್ಸ್ ತಲೆನೋವಾಗಿ ಪರಿಗಣಿಸಿದೆ. ಗಣೇಶ ಮೂರ್ತಿ ವಿಸರ್ಜನೆ ನಂತ್ರ 800 ವಾಲೆಟ್ಸ್ ಪೊಲೀಸರ ಕೈಗೆ ಸಿಕ್ಕಿದೆ. ಅದ್ರಲ್ಲಿ ಹಣವಿಲ್ಲ. ಆದ್ರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಎಲ್ಲ ದಾಖಲೆಗಳು ಹಾಗೆ ಇವೆ.
ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಾಲ್ಕು ಕಡೆ ಈ ವಾಲೆಟ್ಸ್ ಸಿಕ್ಕಿದೆಯಂತೆ. ಜೇಬುಗಳ್ಳರು ಗುಂಪಿನ ಮಧ್ಯೆ ತಮ್ಮ ಕೈಚಳಕ ತೋರಿದ್ದಾರೆ.
ವಾಲೆಟ್ಸ್ ನಲ್ಲಿದ್ದ ನಗದನ್ನು ದೋಚಿ, ವಾಲೆಟ್ಟನ್ನು ರಸ್ತೆ ಪಕ್ಕದಲ್ಲಿ ಎಸೆದಿದ್ದಾರೆ. ದೂರವಾಣಿ ಸಂಖ್ಯೆ ಇರುವವರಿಗೆ ಅದನ್ನು ವಾಪಸ್ ಮಾಡಲಾಗ್ತಾ ಇದೆ. ಉಳಿದ ವಾಲೆಟ್ಸ್ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಪೊಲೀಸರು ಹೇಳಿದ್ದಾರೆ.