ನ್ಯೂಜೆರ್ಸಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳ ಮಧ್ಯೆ ಕುಸ್ತಿ ಮಾಡಿಸಿ ಮಜಾ ತೆಗೆದುಕೊಳ್ಳುತ್ತ ಫೈಟ್ ಕ್ಲಬ್ ನಡೆಸ್ತಾ ಇದ್ದ ಇಬ್ಬರು ಡೇ ಕೇರ್ ಶಿಕ್ಷಕಿಯರು ಸಿಕ್ಕಿಬಿದ್ದಿದ್ದಾರೆ.
ಎರಿಕಾ ಕೆನ್ನಿ ಹಾಗೂ ಚಾನಿಸೆ ವೈಟ್ ಸಿನಿಮಾ ಒಂದರಿಂದ ಪ್ರೇರೇಪಣೆ ಪಡೆದು ಡೇ ಕೇರ್ ಹೆಸರಲ್ಲಿ ಮಕ್ಕಳ ಮಧ್ಯೆ ಕುಸ್ತಿ ನಡೆಸ್ತಾ ಇದ್ರು. ಆಗಸ್ಟ್ 2015ರಲ್ಲಿ ಕ್ಯಾನ್ಫೋರ್ಡ್ ನಲ್ಲಿ ಇವರು ಲೈಟ್ ಬ್ರಿಡ್ಜ್ ಅಕಾಡೆಮಿಯೊಂದನ್ನು ಆರಂಭಿಸಿದ್ದಾರೆ. ಅಲ್ಲಿ 4-6 ವರ್ಷದ ಮಕ್ಕಳಿಗೆ ಪ್ರವೇಶಾವಕಾಶವಿತ್ತು.
ಡೇ ಕೇರ್ ಹೆಸರಲ್ಲಿ ಆರಂಭವಾದ ಈ ಅಕಾಡೆಮಿಯಲ್ಲಿ ಎರಿಕಾ ಹಾಗೂ ಚಾನಿಸೆ ಮಕ್ಕಳ ಮಧ್ಯೆ ಜಗಳ ಏರ್ಪಡಿಸ್ತಾ ಇದ್ರು. ಪರಸ್ಪರ ಬೈದಾಡಿಕೊಳ್ಳುತ್ತ, ಜುಟ್ಟು ಹಿಡಿದು ಎಳೆದಾಡುತ್ತ ಮಕ್ಕಳು ಹೊಡೆದಾಡಿಕೊಳ್ಳುವಂತೆ ಮಾಡುತ್ತಿದ್ರು. ಆ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡ್ತಾ ಇದ್ರು. ಕೊನೆಗೂ ಇವರ ಹುಚ್ಚಾಟ ಬಯಲಾಗಿತ್ತು, ಇಬ್ಬರನ್ನೂ ಬಂಧಿಸಲಾಗಿದೆ. ಮಕ್ಕಳಿಗೆ ಕಿರುಕುಳ ಕೊಟ್ಟ ಆರೋಪದ ಮೇಲೆ ಸದ್ಯದಲ್ಲೇ ಇಬ್ಬರಿಗೂ ಶಿಕ್ಷೆ ಕೂಡ ಪ್ರಕಟವಾಗಲಿದೆ.