ಕುಟುಂಬವೊಂದು ಮಗನ ಮೃತದೇಹ ಪಡೆಯಲು ಸತತ ಐದು ತಿಂಗಳುಗಳ ಕಾಲ ಅಲೆದಾಡಿದೆ. ಸ್ಥಳೀಯ ಆಡಳಿತದಿಂದ ಹಿಡಿದು ಕೇಂದ್ರ ಸಚಿವರವರೆಗೆ ಭೇಟಿ ಮಾಡಿ ಬಂದಿದೆ. ಆದ್ರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಯದಾಗಿ ವಿದೇಶಾಂಗ ಸಚಿವಾಲಯ ಕುಟುಂಬದ ನೆರವಿಗೆ ಬಂದಿದೆ. ಶನಿವಾರ ದುಬೈನಿಂದ ಮೃತದೇಹವನ್ನು ಭಾರತಕ್ಕೆ ತರಲಾಗಿದೆ.
ಇದು ಉತ್ತರಪ್ರದೇಶ ಪ್ರತಾಪ್ಘರ್ ದ ಮಾನಿಕ್ಪುರ ಠಾಣಾ ವಲಯದ ಲಟ್ಟಾರಾ ಗ್ರಾಮದಲ್ಲಿ ನೆಲೆಸಿರುವ ಕುಟುಂಬವೊಂದು ಅನುಭವಿಸಿದ ನೋವಿನ ಕಥೆ. ಸುಖರಾಮ್ ಮೌರ್ಯ ಎಂಬುವವರ ಮಗ ಪಂಕಜ್ ಮೌರ್ಯ ಕೆಲಸಕ್ಕಾಗಿ ದುಬೈಗೆ ಹೋಗಿದ್ದ. ಕಂಪನಿಯೇ ಆತನನ್ನು ದುಬೈಗೆ ಕಳುಹಿಸಿತ್ತು.
ಏಪ್ರಿಲ್ 11ರಂದು ಕಂಪನಿಯಿಂದ ಫೋನ್ ಬಂದಿದೆ. ಪಂಕಜ್ ಏಪ್ರಿಲ್ 9 ರಂದು ಸಾವನ್ನಪ್ಪಿದ್ದಾನೆಂದು ಅವರು ತಿಳಿಸಿದ್ದಾರೆ. ಮಗನ ಮೃತದೇಹವನ್ನು ಊರಿಗೆ ತರಲು ಕುಟುಂಬಸ್ಥರು ಮುಂದಾಗಿದ್ದಾರೆ. ಪಂಚಾಯತಿಯಿಂದ ಹಿಡಿದು ಕೇಂದ್ರದವರೆಗೂ ಅಲೆದಾಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ನಂತ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಮನವಿ ಸಲ್ಲಿಸಿದ್ದಾರೆ. ಕುಟುಂಬದ ನೋವಿಗೆ ಸ್ಪಂದಿಸಿದೆ ಸಚಿವೆ ಮೃತದೇಹವನ್ನು ಊರಿಗೆ ತರಲು ನೆರವಾಗಿದ್ದಾರೆ.
ಪಂಕಜ್ ಕೆಲಸ ಮಾಡ್ತಿದ್ದ ಕಂಪನಿಯವರು ಮೃತದೇಹ ರವಾನೆಗೆ ಎರಡು ಲಕ್ಷ ಕೇಳಿದ್ದರು ಎನ್ನಲಾಗಿದೆ. ಕಂಪನಿ ಅಕೌಂಟ್ ಗೆ ಹಣ ಜಮಾ ಮಾಡಲಾಗಿದೆ. ಹಣ ಸಿಕ್ಕ ನಂತ್ರ ಫೋನ್ ತೆಗೆದುಕೊಳ್ಳುತ್ತಿರಲಿಲ್ಲವಂತೆ ಕಂಪನಿ ಸಿಬ್ಬಂದಿ. ಐದು ತಿಂಗಳ ನಂತ್ರ ಪಾಲಕರು ಸತ್ತ ಮಗನ ಮುಖ ನೋಡುವಂತಾಗಿದೆ.